ಕೋಲಾರ: ರೈತರು ಯಾವುದೇ ಒಂದು ಬೆಳೆಯನ್ನು ತೆಗೆಯಬೇಕಾದರೆ ಬಹಳಷ್ಟು ಶ್ರಮ ಪಡುತ್ತಾರೆ ಲಕ್ಷಾಂತರ ರೂಪಾಯಿ ಬಂಡವಾಳವನ್ನು ಸಹಾ ಹಾಕುತ್ತಾರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಹೋದಂತಹ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ಬೆಂಬಲ ಬೆಲೆಗೆ ಮಾರಾಟವಾಗದೆ ಬಹಳಷ್ಟು ರೈತರು ಸಾಲಗಳಾಗಿ ಸಾಲಗಳನ್ನು ತಿಳಿಸಲಾಗಿದೆ ಕೆಲ ರೈತರು ಊರು ಬಿಟ್ಟು ಹೋಗಿದ್ದಾರೆ.
ಇನ್ನು ಕೆಲ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಒಂದಲ್ಲ ಒಂದು ರೀತಿಯಲ್ಲಿ ರೈತರಿಗೆ ಹೊಡೆತವೇ ಬೀಳುತ್ತಿದ್ದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಭೈರವೇಶ್ವರ ವಿದ್ಯಾನಿಕೇತನದ ಸಮೀಪ ಆಂಧ್ರಪ್ರದೇಶದಿಂದ ಜ್ಯೂಸ್ ಫ್ಯಾಕ್ಟರಿಗೆ ಟೊಮೊಟೊ ಹಣ್ಣು ಸಾಗಟ ಮಾಡುತ್ತಿದ್ದ ಲಾರಿಗೆ ಹಗ್ಗ ಬಿಗಿಯಾಗಿ ಕಟ್ಟದ ಕಾರಣದಿಂದಾಗಿ ಟೊಮೊಟೊ ಹಣ್ಣುಗಳು ಸಂಪೂರ್ಣವಾಗಿ ಮಣ್ಣುಪಾಲಾಗಿವೆ ಕೂಡಲೇ ಸ್ಥಳಕ್ಕೆ ಬೇರೊಂದು ವಾಹನವನ್ನು ಕರೆಸಿಕೊಂಡು ವಾಹನಕ್ಕೆ ಬದಲಾವಣೆ ಮಾಡಿದ್ದಾರೆ ಕಳೆದ ಎರಡು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವ ಕಾರಣ ಮಣ್ಣು ಪಾಲದಂತಹ ಟೊಮೊಟೊಗಳನ್ನು ಸಂಪೂರ್ಣವಾಗಿ ಅಲ್ಲೇ ಬಿಡಲಾಗಿದ್ದು ರೈತರಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ.