ಹೈದರಾಬಾದ್: ತೆಲಂಗಾಣದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಆರ್ಎಸ್ ಪಕ್ಷಕ್ಕೆ ನಿರಾಸೆಯಾಗಿದೆ. ಪಕ್ಷದ ಹೀನಾಯ ಸೋಲನ್ನು ಕೆ.ಚಂದ್ರಶೇಖರ್ ರಾವ್ ಅವರ ಪುತ್ರ ಹಾಗೂ ಮಾಜಿ ಸಚಿವ ಕೆ.ಟಿ.ರಾಮ ರಾವ್ ಒಪ್ಪಿಕೊಂಡಿದ್ದಾರೆ. ಅಲ್ಲದೇ ತಮ್ಮದೇ ಟ್ವೀಟ್ಗೆ ಪ್ರತಿಕ್ರಿಯೆ ನೀಡಿ ತಮ್ಮನ್ನು ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ.
ಚುನಾವಣೆ ಫಲಿತಾಂಶಕ್ಕೂ ಮುನ್ನ ಕೆಟಿಆರ್ ಪೋಸ್ಟ್ ಮಾಡಿದ್ದ ಹಳೇ ಟ್ವೀಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ. ಹಳೇ ಟ್ವೀಟ್ನಲ್ಲಿ, ಕ್ಯಾಮೆರಾದ ಕಡೆಗೆ ಗನ್ ತೋರಿಸುತ್ತಿರುವ ಚಿತ್ರವಿದೆ. ಈ ಹಳೆಯ ಪೋಸ್ಟ್ನ ಶೀರ್ಷಿಕೆಯಲ್ಲಿ, “ಹ್ಯಾಟ್ರಿಕ್ ಲೋಡಿಂಗ್ 3.0. ಸಂಭ್ರಮಿಸಲು ಸಿದ್ಧರಾಗಿ” ಎಂದು ಕೆಟಿಆರ್ ಬರೆದುಕೊಂಡಿದ್ದರು.
ಆದರೆ ಫಲಿತಾಂಶದ ನಂತರ ಸಚಿವರು ತಮ್ಮದೇ ಪೋಸ್ಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಇವನಿಗೆ ವಾಯಸ್ಸಾಗಿದೆ. ಗುರಿ ತಪ್ಪಿದೆ’ ಎಂದು ಬರೆದುಕೊಂಡಿದ್ದಾರೆ. ಪಕ್ಷದ ಸೋಲಿಗೆ ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಾರೆ.
ಸಚಿವರ ಟ್ವೀಟ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್, ಎಷ್ಟೋ ಮಂದಿ ಸೋಲನ್ನು ಮನೋಹರವಾಗಿ ಸ್ವೀಕರಿಸುವುದಿಲ್ಲ. ಸೋಲಿನ ನಂತರವೂ ನಿಮ್ಮ ಹಾಸ್ಯಪ್ರಜ್ಞೆಯನ್ನು ನೀವು ಉಳಿಸಿಕೊಂಡಿರುವುದು ಒಳ್ಳೆಯದು’ ಎಂದು ರಿಯಾಕ್ಟ್ ಮಾಡಿದ್ದಾರೆ