ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಶಂಕರಲಿಂಗ ಸರ್ಕಲದಲ್ಲಿ ಪಂಚರಾಜ್ಯ ಚುನಾವಣೆ ರಾಜಸ್ಥಾನ ಮಧ್ಯಪ್ರದೇಶ ಛತ್ತಿಸ್ಗಢ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಭಾರತ ದೇಶದ ಭದ್ರತೆಗಾಗಿ ಮತದಾರರು ಬಿಜೆಪಿ ಗೆಲ್ಲಿಸಿದ್ದಾರೆ. ಬಿಟ್ಟಿ ಗ್ಯಾರಂಟಿಗೆ ಬಗ್ಗದೆ ದೇಶದ ಭದ್ರತೆಗಾಗಿ ಮತದಾರರು ಬಿಜೆಪಿ ಗೆಲ್ಲಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಜೆಬಿಗೆ ಕತ್ರಿ ಹಾಕಿ ಬಿಟ್ಟಿ ಭಾಗ್ಯಗಳು ನೀಡುತ್ತಿದ್ದಾರೆ.
ಅಂತಹ ಬಿಟ್ಟಿ ಭಾಗ್ಯಗಳಿಗೆ ಪಂಚ ರಾಜ್ಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಸಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ದೇಶದ ಸುಭದ್ರತೆ ಮತ್ತು ಮೋದಿಯವರ ಕಾರ್ಯ ವೈಖರಿಯಗಳನ್ನು ನೋಡಿ ರಾಜಸ್ಥಾನ ಮಧ್ಯಪ್ರದೇಶ ಛತ್ತಿಸ್ಗಢ ದಲ್ಲಿ ಅಬುತಪೂರ್ವ ಬಿಜೆಪಿ ಗೆಲ್ಲಿಸುವುದರ ಜೊತೆಗೆ ಕಾಂಗ್ರೆಸ್ಸಕ್ಕೆ ತಕ್ಕ ಪಾಠ ಕಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಮಣ್ಣ ಹುಲಕುಂದ. ಸಂಜಯ ತೆಗ್ಗಿ. ಬಸವರಾಜ ತೆಗ್ಗಿ. ಮಾರುತಿ ಗಾಡಿವಡ್ಡರ. ರವಿ ಕೋರತಿ. ಶ್ರೀಶೈಲ ದಲಾಲ ಮಾಹಾದೇವ ದುಪದಾಳ ಬಸವರಾಜ ಅಮ್ಮನಿಗಿಮಠ ಯಲ್ಲಪ್ಪ ಕಟಗಿ ಪ್ರಕಾಶ ಸಿಂಘನ ಬಾಬು ಮಹಾಜನ ಪದ್ದು ಜುಗಳಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ