ಹುಬ್ಬಳ್ಳಿ: ಸದಾ ಸುಖಿ ಬದುಕಿಗೆ ಯಾವುದೇ ವಯಸ್ಸಿನ ಹಂಗಿಲ್ಲದೇ ಒಂದಲ್ಲ ಒಂದು ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ಹಿರಿಯ ಕ್ರೀಡಾಪಟು ವಿರುಪಾಕ್ಷಗೌಡ ಪಾಟೀಲ ಹೇಳಿದರು.
ನಗರದ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿಂದು ಆಯೋಜಿಸಿದ್ದ ಸ್ಪೂರ್ತಿ ದಿನ-ವಾರ್ಷಿಕ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಮನುಷ್ಯನ ಜೀವನದಲ್ಲಿ ದೈಹಿಕ ಆರೋಗ್ಯ ಬಹಳ ಮಹತ್ವದ್ದು. ಯಾವುದೇ ಕ್ರೀಡೆಯಲ್ಲಿ ಪಾಲ್ಗೊಂಡರು ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದರು.
ಅದೃಷ್ಯ ಬಾಗೇವಾಡಿ ಮಾತನಾಡಿ, ಸಂಸ್ಕಾರ ಶಾಲೆಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ, ಅಧ್ಯಕ್ಷ ಮಹಾವೀರ ಕುಂದೂರ, ಕಾರ್ಯದರ್ಶಿ ಸುಧೀರ ವೋರಾ, ಖಜಾಂಚಿ ಉಜ್ವಲ್ ಸಿಂಘಿ, ಇತರರು ಇದ್ದರು. ವಿದ್ಯಾರ್ಥಿ ತನ್ವಿ ಪಾರೇಖ್ ಸ್ವಾಗತಿಸಿದಳು. ಜಯ ಹಬೀಬ ವಂದಿಸಿದರು.