ಬೆಂಗಳೂರು:- ಆಟೋ ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜರುಗಿದೆ.
ನವೆಂಬರ್ 30 ರಂದು ಮನೆಗೆ ಮರಳಲು ರ್ಯಾಪಿಡೋ ಆಟೋ ವನ್ನು ಏರಿದ್ದರು. ಇಂದಿರಾನಗರದ ಬಾಬ್ಸ್ ಬಾರ್ನಿಂದ ಸುಮಾರು 8 ಕಿಮೀ ದೂರದ ಅನ್ನಸಂದ್ರಪಾಳ್ಯ ಪ್ರದೇಶಕ್ಕೆ ಹೋಗಲು ಆಟೋವನ್ನು ಬಾಡಿಗೆಗೆ ಕರೆದಿದ್ದರು.
ಆಟೋ ಚಾಲಕ ಯುವತಿಯ ಸ್ಕರ್ಟ್ ಒಳಗೆ ಕೈ ಹಾಕಿ ಅನುಚಿತವಾಗಿ ಸ್ಪರ್ಷಿಸಿದ್ದು, ಯುವತಿ ಕೂಗಿಕೊಂಡಾಗ ಆಕೆಯನ್ನು ಆಟೋದಿಂದ ಹೊರ ದಬ್ಬಿದ್ದಾನೆ, ಇದರಿಂದ ಆಕೆಯ ಕೈಕಾಲುಗಳಿಗೆ ಗಾಯಗಳಾಗಿವೆ.
ಸಂತ್ರಸ್ತೆ ಕ್ಯೂಆರ್ ಕೋಡ್ ಮೂಲಕ ರಿಕ್ಷಾ ಚಾಲಕನನ್ನು ಗುರುತಿಸಿದ್ದು, ಆತನ ಹೆಸರು ಇಕ್ಲಾಸುದ್ದೀನ್ ಲಸ್ಕರ್ ಎಂದು ತಿಳಿದುಬಂದಿದೆ.
ಪೊಲೀಸರು ಪ್ರಕರಣವನ್ನು ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ತನಿಖೆಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಆಟೋ ಚಾಲಕ ಹೇಳಿಕೆ ನೀಡಿದ್ದಾನೆ