ನನ್ನ ಹೃದಯ ಆರ್ಸಿಬಿಯಲ್ಲೇ ಇದೆ ಎಂದು ಮಿಸ್ಟರ್ 360 ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಭವಿಷ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆ ಮರಳಲು ಬಯಸುತ್ತೇನೆ ಎಂದರು.
ಆದರೂ ಅವರಿಗೆ ಆರ್ಸಿಬಿ ಬಗ್ಗೆ ವಿಶೇಷವಾದ ಅಭಿಮಾನವಿದೆ. ಹೀಗಾಗಿ ಅವರು ಈ ತಂಡವನ್ನು ಅವರು ಪದೇಪದೇ ಉಲ್ಲೇಖಿಸುತ್ತಾರೆ.
ಐಪಿಎಲ್ನಲ್ಲಿ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಮತ್ತೆ ಒಂದಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಕಾಲ ಕೂಡಿ ಬಂದಿಲ್ಲ. ಅವರು ಆರ್ಸಿಬಿಗೆ ಮಾರ್ಗದರ್ಶಕರಾಗಿ ಸೇರುತ್ತಾರೆ ಎಂಬ ವದಂತಿಗಳಿದ್ದವು. ಅದು ಸುಳ್ಳಾಯಿತು. ಎಬಿ ಡಿವಿಲಿಯರ್ಸ್ ಕಳೆದ ಋತುವಿನಲ್ಲಿ ಅಭಿಮಾನಿಗಳಿಗೆ ವಿದಾಯ ಹೇಳಲು ಬೆಂಗಳೂರಿಗೆ ಬಂದಿದ್ದರು. ಆದಾಗ್ಯೂ, ಅವರು ಮುಂದಿನ ದಿನಗಳಲ್ಲಿ ಆರ್ಸಿಬಿಗೆ ಸೇರಲು ಎದುರು ನೋಡುತ್ತಿದ್ದಾರೆ. ಆರ್ಸಿಬಿ ನನ್ನ ಹೃದಯದಲ್ಲಿದೆ ಎಂದು ಹೇಳುವ ಮೂಲಕ ಅವರ ಈ ಮಾತಿಗೆ ಪುಷ್ಟಿ ಕೊಟ್ಟಿದ್ದಾರೆ.