ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ವಿನಯ್, ವರ್ತೂರ್ ಸಂತೋಷ್, ತನಿಷಾ, ಸ್ನೇಹಿತ್, ಸಂಗೀತಾ, ಪ್ರತಾಪ್, ನಮ್ರತಾ, ಮೈಕಲ್ ನಾಮಿನೇಟ್ ಆಗಿದ್ದಾರೆ. ಯಾರಿಗೆ ದೊಡ್ಮನೆಯಿಂದ ಗೇಟ್ ಪಾಸ್ ಸಿಗುತ್ತದೆ ಎಂಬುದು ಕಿಚ್ಚನ ಪಂಚಾಯಿತಿಯಲ್ಲಿ ಗೊತ್ತಾಗಲಿದೆ.
ಇದೀಗ ಪ್ರೇಕ್ಷಕರು ಯಾವೆಲ್ಲ ವಿಚಾರಗಳು ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಯಾಗಬೇಕು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಪ್ರತಾಪ್ ಅತೀ ಬುದ್ಧಿವಂತಿಕೆಯಿಂದ ಸರಣಿ ಟಾಸ್ಕ್ ಸೋತಿದ್ದು
ಕಾರ್ತಿಕ್ ಅವರನ್ನು ಪ್ರತಾಪ್ ಹೊರಗಿಟ್ಟು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು
ವಿನಯ್ ಬೇಕು ಅಂತಲೇ ತುಕಾಲಿ ಅವರನ್ನು ತಳ್ಳಿದ್ದು
ನಮ್ರತಾ ಚಮಚ ಗ್ಯಾಂಗ್ ಬಿಟ್ಟು ಉತ್ತಮ ಪ್ರದರ್ಶನ ನೀಡಿದ್ದು
ವೈಲ್ಡ್ ಕಾರ್ಡ್ ಎಂಟ್ರಿ ಅವರು ಹೊರಗಿನ ವಿಚಾರ ಚರ್ಚಿಸಿದ್ದು
ಸಂಗೀತಾ ಹಾಗೂ ಕಾರ್ತಿಕ್ ಮತ್ತೆ ಒಂದಾಗಿದ್ದು
ಮೈಕಲ್ ಕನ್ನಡವನ್ನು ಓದಿ ಕನ್ನಡಿಗರ ಹೃದಯ ಗೆದ್ದಿದ್ದು
ಹಳ್ಳಿಕಾರ್, ಬೆಂಕಿ ಅವರ ಪ್ರೀತಿ, ಪ್ರೇಮ, ಪ್ರಣಯ ಪ್ರಸಂಗಗಳು
ತುಕಾಲಿ ಅವರ ಟಾಸ್ಕ್ನಲ್ಲಿ ಬ್ರಹ್ಮಲಿಪಿ ಅರ್ಥವಾಗದೇ ಇದ್ದದ್ದು
ತುಕಾಲಿ ಅವರ Biology, Physics, chemistry
ಸ್ನೇಹಿತ್ ಟಾಸ್ಕ್ನಲ್ಲಿ ಗೆದ್ದು ವಿನಯ್ ಅಣ್ಣನವರ ಮೇಲೆ ಪ್ರೀತಿ ಉಕ್ಕಿದ್ದು
ಕಾರ್ತಿಕ್ಗೆ ಕಿಚ್ಚನ ಚಪ್ಪಾಳೆ ಸಿಗಬೇಕು ಎಂಬುದು ನೆಟ್ಟಿಗರ ಆಸೆಯಾಗಿದೆ
ಕಳೆದ ಬಾರಿ ಕ್ಯಾಪ್ಟನ್ ಆಗಿದ್ದ ನೀತು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಈ ಬಾರಿ ಸ್ನೇಹಿತ್ ಕೂಡ ಕ್ಯಾಪ್ಟನ್ ಆಗಿದ್ದು ಎಲಿಮಿನೇಷನ್ ಆಗುತ್ತಾರಾ ಎಂಬ ಚರ್ಚೆಗಳು ಶುರುವಾಗಿವೆ. ಕಿಚ್ಚನ ಚಪ್ಪಾಳೆ ಬಗ್ಗೆಯೂ ಹಲವು ಚರ್ಚೆಗಳು ಆಗುತ್ತಿವೆ.