ಬಳ್ಳಾರಿ:- ನಮ್ಮ ಶಾಸಕರ ರಕ್ಷಣೆಗೆ ನಾವು ಹೈದರಾಬಾದ್ಗೆ ಹೋಗುತ್ತಿದ್ದೇವೆ ಎಂದು ಸಚಿವ ಬಿ. ನಾಗೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ತೆಲಂಗಾಣದ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಮತ್ತು ಬಿಆರ್ಎಸ್ ಪಕ್ಷದವರು ಸೇರಿ ಏನಾದರೂ ಮಾಡುತ್ತಾರೆ ಎನ್ನುವ ಭಯ ಇದೆ. ನಮ್ಮ ಶಾಸಕರಿಗೆ ವಿರೋಧ ಪಕ್ಷಗಳು ಬೆದರಿಕೆ ಒಡ್ಡುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ಶಾಸಕರ ರಕ್ಷಣೆಗೆ ನಾವು ಹೈದರಾಬಾದ್ಗೆ ಹೋಗುತ್ತಿದ್ದೇವೆ ಎಂದರು.
ತೆಲಂಗಾಣದಲ್ಲಿ ಬಿಜೆಪಿ ಹಾಗೂ ಬಿಆರ್ಎಸ್ ಪಕ್ಷದಿಂದ ಕಾಂಗ್ರೆಸ್ಗೆ ಭಯ ಇದೆ. ಹೀಗಾಗಿ ನಮಗೆಲ್ಲರಿಗೂ ತೆಲಂಗಾಣಕ್ಕೆ ಹೋಗುವಂತೆ ಎಐಸಿಸಿ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.
ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆ ಇದೆ. ಆದರೆ ಬಿಜೆಪಿ ದೇಶದಲ್ಲಿ ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ನಮ್ಮ ಶಾಸಕರಿಗೆ ಬಿಜೆಪಿ ಮತ್ತು ಬಿಆರ್ಎಸ್ ಪಕ್ಷದವರು ಸೇರಿ ಏನಾದರೂ ಮಾಡುತ್ತಾರೆ ಎನ್ನುವ ಭಯವಿದ್ದು, ಚುನಾಯಿತ ಶಾಸಕರ ರಕ್ಷಣೆಗೆ ನಾವು ತೆಲಂಗಾಣಕ್ಕೆ ಹೋಗುತ್ತಿದ್ದೇವೆ ಎಂದು ನಾಗೇಂದ್ರ ಮಾಹಿತಿ ನೀಡಿದ್ದಾರೆ.
ಬಿಜೆಪಿ ಗೆದ್ದ ಅಭ್ಯರ್ಥಿಗಳಿಗೆ ಗಾಳ ಹಾಕುವ ಪ್ಲ್ಯಾನ್ ಮಾಡಿದೆ. ಅದಕ್ಕೆ ನಮ್ಮ ರಾಜ್ಯವೇ ಉದಾಹರಣೆ. ರಾಜ್ಯದಲ್ಲಿ ನಮ್ಮ ಶಾಸಕರನ್ನು ಕರೆದುಕೊಂಡು, ಹಿಂಬದಿಯಿಂದ ಸರಕಾರ ರಚನೆ ಮಾಡಿದ್ದರು. ತೆಲಂಗಾಣದಲ್ಲಿಯೂ ಮತ್ತೆ ಆಪರೇಷನ್ ಮಾಡುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ