ಬೆಂಗಳೂರು:- ಯಾವ ಕಾರಣಕ್ಕೂ ಮುಖ್ಯಮಂತ್ರಿ ಕುರ್ಚಿ ಖಾಲಿಯಾಗುವುದೇ ಇಲ್ಲ ಎಂದು ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಇರಬಹುದು. ಅದನ್ನ ತಪ್ಪು ಎಂದು ಹೇಳುವುದಿಲ್ಲ. ಆದರೆ, ಮುಖ್ಯಮಂತ್ರಿ ಕುರ್ಚಿಯೇ ಖಾಲಿ ಇಲ್ಲವಲ್ಲ. ಯಾವ ಕಾರಣಕ್ಕೂ ಮುಖ್ಯಮಂತ್ರಿ ಖುರ್ಚಿ ಖಾಲಿಯಾಗುವುದೇ ಇಲ್ಲ ಎಂದರು.
ಈಗ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಹೀಗಿರುವಾಗ ಯಾಕೆ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಉದ್ಭವಾಗುತ್ತದೆ’ ಎಂದರು.
‘ಸಿದ್ದರಾಮಯ್ಯಗೆ ಮೊದಲಿದ್ದ ಸ್ವಾತಂತ್ರ್ಯ ಈಗ ಇದ್ದಂತಿಲ್ಲ, 2013 ಸುವರ್ಣಯುಗವಾಗಿತ್ತು ಎಂಬ ಮಾಜಿ ಸಚಿವ ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರಿಗೆ ಯಾಕೆ ಸ್ವಾತಂತ್ರ್ಯ ಇಲ್ಲ. ಅವರು ಯಾವಾಗಲೂ ಸ್ವಾತಂತ್ರ್ಯ ಇರುವ ವ್ಯಕ್ತಿ. ಅವರು ಎಂದೂ ಸ್ವಾತಂತ್ರ್ಯ ಕಳೆದುಕೊಂಡು ಆಡಳಿತ ನಡೆಸುವುದಿಲ್ಲ. ಅವರ ಕೈ ಕಟ್ಟಿ ಹಾಕಿದಿದ್ದರೆ, ಸಹಿ ಯಾಕೆ ಹಾಕುತ್ತಾರೆ’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನ ಎಲ್ಲಾ ಅವಧಿಯೂ ಸುವರ್ಣಯುಗವೇ. ಬಡವರು, ದೀನ ದಲಿತರು, ಜನಸಾಮಾನ್ಯರಿಗೆ ಸುವರ್ಣಯುಗವೇ. ಅದರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹೆಚ್ಚೆಚ್ಚು ಒಳ್ಳೆಯ ಕಾರ್ಯಕ್ರಮಗಳು ಇರುತ್ತವೆ. ಆದರೆ, ಆಂಜನೇಯ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ’ ಎಂದರು.