ರಾಯಚೂರು: ನಗರದ ಸುಪರ್ ಮಾರ್ಕೆಟ್ ಬಳಿ ಸ್ವಾಗತ ಕಮಾನು ನಿರ್ಮಾಣ ವಿವಾದ ಬಗ್ಗೆ ಜಿಲ್ಲಾಡಳಿತದಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ ಯಾವುದೆ ಕಾರಣಕ್ಕೂ ಕೋಮು ಸೌಹಾರ್ದತೆ ಕದಡಲು ಬಿಡುವುದಿಲ್ಲವೆಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸ್ವಾಗತ ಕಮಾನು ನಿರ್ಮಾಣ ಬಗ್ಗೆ ವಿವಾದ ನಡೆದಿದ್ದು ಈ ಬಗ್ಗೆ ಜಿಲ್ಲಾಡಳಿತ ಮತ್ತು ನಗರಸಭೆಯಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆಂದ ಅವರು ಶಾಂತಿ ಸುವ್ಯವಸ್ಥೆ ಹದಗೆಡದಂತೆ ಸರ್ಕಾರ ಎಚ್ಚರಕೆ ವಹಿಸಲಿದ್ದು ಯಾವುದೆ ಅನಾಹುತ ಆಗಲು ಬಿಡುವುದಿಲ್ಲ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದರು.