ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಎಲ್ಲಾ ಸ್ಪರ್ಧಿಗಳು ಇದೀಗ ತಮ್ಮ ಬದುಕಿನ ಭಾವನಾತ್ಮಕ ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಬದುಕಿನ ದಿಕ್ಕನ್ನೇ ಬದಲಿಸಿದ ಕೆಲ ಘಟನೆಗಳು ಏಳು ಬೀಳಿನ ಹಾದಿ ಹೇಗಿತ್ತು ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. 50 ದಿನ ಪೂರೈಸಿರೋ ಸ್ಪರ್ಧಿಗಳಿಗೆ ಮನಸ್ಸು ಭಾರ ಆಗಿರುತ್ತದೆ. ಹಾಗಾಗಿ ಟಾಸ್ಕ್ ಮುಗಿದ ಮೇಲೆ ತಮ್ಮ ಬದುಕಿನ ಟರ್ನಿಂಗ್ ಪಾಯಿಂಟ್ ಬಗ್ಗೆ ಮಾತನಾಡಿದ್ದಾರೆ. ಅದರಂತೆಯೇ ನಟಿ ಸಂಗೀತಾ ಶೃಂಗೇರಿ ಅವರು ತಮ್ಮ ತಾಯಿಯ ಕಣ್ಣಿನ ಆಪರೇಷನ್ ಮಾಡಿಸುವಾಗ ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದಾರೆ.
ಸಂಗೀತಾ ಅವರು ಶಿಸ್ತು ಬದ್ಧ ಕುಟುಂಬದಲ್ಲಿ ಬೆಳೆದವರು. ಅವರ ತಂದೆ ಏರ್ಫೋರ್ಸ್ಲ್ಲಿದ್ದವರು. ಟ್ರಾನ್ಸಫರ್ ಆಗುತ್ತಲೇ ಇತ್ತು. ಫ್ರೆಂಡ್ಸ್ ಬದಲಾಗುತ್ತಲೆ ಇದ್ದರು. ನಾನು ಕಾಲೇಜಿನಲ್ಲಿ ಓದುವಾಗ ಅಪ್ಪ ರಿಟೈರ್ಮೆಂಟ್ ತೆಗೆದುಕೊಂಡರು. ಆದರೆ, ಆಗ ಅಪ್ಪನಿಗೆ ಬೇರೆ ಕೆಲಸ ಬೇಗ ಸಿಗಲಿಲ್ಲ. ಈ ಕಡೆ ಅಮ್ಮನಿಗೆ ಕಣ್ಣಿನ ಸಮಸ್ಯೆಯೂ ಇತ್ತು. ಕಾಲೇಜು ಫೀಸ್ ಕಟ್ಟುವುದಕ್ಕೂ ಕಷ್ಟ ಆಗಿತ್ತು ಎಂದು ಹೇಳಿದ್ದಾರೆ.
ಆದರೆ, ನನಗೆ ಅಮ್ಮನ ಕಣ್ಣಿನ ಆಪರೇಷನ್ ಮಾಡಿಸಬೇಕೆಂಬ ಆಸೆ ಇತ್ತು. ನನ್ನ ತಾಯಿಗೆ ಒಂದು ಕಣ್ಣು ಪ್ರಾಬ್ಲಂ ಇತ್ತು. ಒಂದು ಕಣ್ಣು ಕ್ಲಿಯರ್ ಆಗಿ ಕಾಣಿಸುತ್ತಿರಲಿಲ್ಲ. ನನಗೆ ಒಂದು ಡ್ರೀಮ್ ಇತ್ತು. ನಾನು ಚೆನ್ನಾಗಿ ದುಡಿದು ಅಮ್ಮನ ಕಣ್ಣಿನ ಆಪರೇಶನ್ ಮಾಡಿಸಬೇಕು, ಕಣ್ಣನ್ನ ರೀಪ್ಲೇಸ್ ಮಾಡಿಸಬೇಕು ಅಂತ ನನಗೆ ಕನಸು ಇತ್ತು ಎಂದರು ಸಂಗೀತಾ ಶೃಂಗೇರಿ.
ಅದಕ್ಕಾಗಿ ಮದುವೆ ಮನೆಯಲ್ಲಿ ಸ್ವಾಗತ ಕೋರುವ ಕೆಲಸವನ್ನು ಮಾಡಿದ್ದೀನಿ. ಆದರೆ, ಬೇರೆ ಕೆಲಸ ಮಾಡಿಸಿಕೊಂಡವರು ಹಣವನ್ನೇ ಕೊಡದೆ ಆಟ ಆಡಿಸಿದ್ದು ಇದೆ. ಕೆಲವೊಂದು ಘಟನೆ ಜೀವನದ ಪಾಠ ಕಲಿಸಿದೆ. ಈಗ ಎಲ್ಲಿಗೆ ಬೇಕಾದರೂ ಒಬ್ಬಳೆ ಹೋಗುತ್ತೀನಿ ಎಂದು ಜೀವನದ ಅನುಭವ ಹೇಳಿದ್ದಾರೆ. ಈಗ ಒಂಟಿಯಾಗಿ ಎಲ್ಲವನ್ನೂ ಎದುರಿಸುತ್ತೀನಿ ಎಂದು ಹೇಳುತ್ತಾ ಸಂಗೀತಾ ಕಣ್ಣೀರಿಟ್ಟಿದ್ದಾರೆ. ಒಟ್ನಲ್ಲಿ ಸಂಗೀತಾರ ಬದುಕಿನ ಕಥೆ ಕೇಳಿ ಮನೆಮಂದಿ ಕೂಡ ಭಾವುಕರಾಗಿದ್ದಾರೆ.