ಮೈಸೂರು: ಕಾಂತರಾಜ್ ವರದಿ ಜಾರಿಗೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಿ.ಟಿ ರವಿ, ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.ಮೈಸೂರಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತಾಡಿದ ಅವರು, ,ಕೆರೆ ಕಲಕಿ ಮೀನು ಹಿಡಿಯುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ಇದರಲ್ಲಿ ಕಾಂಗ್ರೆಸ್ ನಡೆ ಅನುಮಾನ ಮೂಡಿಸುತ್ತಿದೆ. 2014 ರಲ್ಲಿ ಕಾಂಗ್ರೆಸ್ ಸರ್ಕಾರವೇ ಕಾಂತರಾಜ್ ಸಮಿತಿ ನೇಮಕ ಮಾಡಿತ್ತು. 3 ವರ್ಷಗಳಲ್ಲಿ ವರದಿ ರೆಡಿ ಆಗಿತ್ತು.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಇವರಿಗೆ ವರದಿ ಜಾರಿ ಮಾಡುವ ಉದ್ದೇಶವೇ ಕಾಣುತ್ತಿಲ್ಲ. ಇದನ್ನು ಮುಂದಿಟ್ಟುಕೊಂಡು ಜಾತಿ ಜಾತಿ ನಡುವೆ ಕಲಹ ತರುವ ಕೆಲಸ ಮಾಡುತ್ತಿದ್ದಾರೆ.ಆ ಮೂಲಕ ಜಾತಿ, ಜಾತಿ ಕಲಕಿ ಮತ ಎಂಬ ಮೀನನ್ನು ಪಡೆಯುವ ಕೆಲಸ ಮಾಡುತ್ತಿದೆ. ಜನ ಹಿಂದೂ ಎಂದರೆ ಬಿಜೆಪಿಗೆ ಮತ ಹಾಕಿಬಿಡುತ್ತಾರೆ. ಹಾಗಾಗಿ ನಿಮ್ಮ ಜಾತಿಗೆ ಅನ್ಯಾಯ ಆಗುತ್ತೆ ಎಂದು ಬಿಂಬಿಸಿ ಮತ ಪಡೆಯಲು ಹೊರಟಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದರು.