50 ದಿನ ಪೂರೈಸಿರೋ ಸ್ಪರ್ಧಿಗಳೂವಾರದ ಎಲ್ಲಾ ಟಾಸ್ಕ್ಗಳಲ್ಲಿ ಡ್ರೋನ್ ಪ್ರತಾಪ್ ನೇತೃತ್ವದ ತಂಡ ಸೋಲು ಅನುಭವಿಸಿದೆ. ಹೀಗಾಗಿ, ಡ್ರೋನ್ ಪ್ರತಾಪ್ ನೇತೃತ್ವದ ಸಂಪೂರ್ಣ ತಂಡ ಕ್ಯಾಪ್ಟೆನ್ಸಿ ರೇಸ್ನಿಂದ ಹೊರಬಿದ್ದಿದೆ. ಮೈಕಲ್ ಟೀಮ್ ಗೆದ್ದಿದೆ. ಇನ್ನೂ ಸಂಗೀತಾ ಶೃಂಗೇರಿ ಹಾಗೂ ತುಕಾಲಿ ಸಂತೋಷ್ ಮಧ್ಯೆ ಯಾವುದೂ ಸರಿ ಇಲ್ಲ. ‘ನನ್ನ ಸುದ್ದಿಗೆ ನೀನು ಬರೋದು ಬೇಡ’ ಎಂದು ಸಂತೋಷ್ ಅವರು ಈಗಾಗಲೇ ಸಂಗೀತಾಗೆ ಅನೇಕ ಬಾರಿ ವಾರ್ನ್ ಮಾಡಿದ್ದಾರೆ. ಆದರೆ, ಸಂಗೀತಾ ಇದನ್ನು ಗಂಭೀರವಾಗಿ ಸ್ವೀಕರಿಸಿಲ್ಲ. ಇದುವೇ ಅವರಿಗೆ ಮುಳುವಾಗಿದೆ.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಕಳೆದ ವಾರ ವರ್ತೂರು ಸಂತೊಷ್ ಅವರು ಕಳಪೆ ಪಟ್ಟ ಪಡೆದಿದ್ದರು. ಈ ವಾರ ಡ್ರೋನ್ ಪ್ರತಾಪ್ಗೆ ಕಳಪೆ ಸಿಕ್ಕಿದೆ. ಮುಂದಿನ ವಾರ ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಸಂಗೀತಾ ಅವರು ನಗುತ್ತಾ, ‘ತುಕಾಲಿ’ ಎಂದಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಸಿಟ್ಟಾಗಿದ್ದಾರೆ. ‘ನನ್ನ ವಿಚಾರಕ್ಕೆ ಬರಲೇಬೇಡ. ನನ್ನನ್ನು ಇಗ್ನೋರ್ ಮಾಡಿಬಿಡು’ ಎಂದು ಜೋರು ಧ್ವನಿಯಲ್ಲೇ ಮಾತನಾಡಿದ್ದಾರೆ.