ಚಾಮರಾಜನಗರ:- ನಗರದಲ್ಲಿ ರಾತ್ರೋರಾತ್ರಿ 7 ಲಕ್ಷ ಹಣ ಕಳ್ಳತನ ನಡೆದಿರುವ ಘಟನೆ ಚಾಮರಾಜನಗರದ ಸಂತೇಮರಳ್ಳಿ ವೃತ್ತದ ಬಳಿ ಇರುವ ನಂದಿನಿ ಹಾಲಿನ ಮುಖ್ಯ ಕೇಂದ್ರದಲ್ಲಿ ಜರುಗಿದೆ.
ಶುಕ್ರವಾರ ರಾತ್ರಿ 1.30 ರಲ್ಲಿ ಕಳ್ಳತನ ನಡೆದಿದೆ. ಇಬ್ಬರು ಯುವಕರಿಂದ ಕಳ್ಳತನ ನಡದಿದೆ. ನಗರದ ಚಿಕ್ಕ ಅಂಗಡಿ ಬೀದಿಯಲ್ಲಿರುವ ನಂದಿನಿ ಹಾಲಿನ ಕೇಂದ್ರ. ಒಬ್ಬ ಕಳ್ಳ ಹೊರಗಿದ್ದು ಮತ್ತೊಬ್ಬ ಕಳ್ಳ ಒಳಗೆ ನುಗ್ಗಿ ಕಂತೆ ಕಂತೆ ಹಣ ಲಪಟಾಯಿಸಿದ್ದಾನೆ. ಹಣ ಕಳವು ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಶ್ವಾನ ದಳದೊಂದಿಗೆ ಪೋಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ.