ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ನೀತು ವನಜಾಕ್ಷಿ ಅವರು ಬಿಗ್ ಮನೆಯೊಳಗಿನ ಹಲವಾರು ಸಂಗತಿಗಳನ್ನು ನೇರವಾಗಿ ಹಂಚಿಕೊಂಡಿದ್ದು, ಡ್ರೋನ್ ಪ್ರತಾಪ್ ಇರುವಿಕೆ ಹಾಗೂ ಇರುವ ರೀತಿಯ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಕೂಡ ನನ್ನ ನೆಚ್ಚಿನ ಸ್ಪರ್ಧಿಯೇ ಆಗಿದ್ದರು. ಯಾಕಂದ್ರೆ ಪ್ರತಿಯೊಬ್ಬರು ಅವರದ್ದೇ ಆಟವಾಡುತ್ತಿದ್ದಾರೆ. ಜತೆಗೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ತುಂಬ ಇಷ್ವವಾದಂತ ವ್ಯಕ್ತಿಗಳು ಅಂದ್ರೆ ಅದು ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್. ಇವರಿಬ್ಬರು ಬಹಳ ಟ್ರೂ ಅನಿಸುತ್ತಿತ್ತು. ಇಬ್ಬರೊಂದಿಗೂ ಸಹ ಉತ್ತಮ ಸಂಬಂಧವಿತ್ತು. ನಾನು ಮನೆಯಿಂದ ಹೊರಬರುವಾಗ ಪ್ರತಾಪ್ ಕಣ್ಣೀರಿಟ್ಟ. ಅವನು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ ತೆಗೆದುಕೊಳ್ಳುತ್ತಾನೆ’ ಎಂದರು.
‘ಪ್ರತಾಪ್ ಮಾತಿನಲ್ಲಿ ಸ್ಪಷ್ಟತೆ ಇದೆ. ಅವನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸರಿಯಾಗಿ ಪರಿಗಣಿಸುತ್ತಾನೆ ಎಂದಿದ್ದಾರೆ.