ಚಿತ್ರದುರ್ಗ: ಕೆ ಆರ್ ಪುರಂ ಠಾಣೆ PSI ಕಲ್ಲಪ್ಪ ಬಳಿಯಿದ್ದ ಪಿಸ್ತೂಲ್ ನಾಪತ್ತೆ ಆಗಿರುವ ಘಟನೆ ಜರುಗಿದೆ. ಬೆಂಗಳೂರಿನ ಕೆ ಆರ್ ಪುರಂ ಠಾಣೆಯ PSI ಕಲ್ಲಪ್ಪ ಅವರ ಪಿಸ್ತೂಲ್ ಕಾಣೆಯಾಗಿದೆ.
ಜಾನಕೊಂಡ ಗ್ರಾಮದ ಬಳಿಯ ರೆಸ್ಟೋರೆಂಟ್ ನಲ್ಲಿ ಘಟನೆ ಜರುಗಿದೆ. ಚಿತ್ರದುರ್ಗ ತಾಲೂಕಿನ ಜಾನಕೊಂಡ ಬಳಿಯ ಬಾರ್& ರೆಸ್ಟೋರೆಂಟ್ ಗೆ PSI ಕಲ್ಲಪ್ಪ ಊಟಕ್ಕೆ ಬಂದಿದ್ದಾಗ ಘಟನೆ ಜರುಗಿದೆ. ಊಟ ಮುಗಿಸಿ ಕೈತೊಳೆದು ಬರುವಷ್ಟರಲ್ಲಿ ಪಿಸ್ತೂಲ್ ನಾಪತ್ತೆ? ಆಗಿದೆ.
ಶಿವಮೊಗ್ಗ ಕಡೆಯಿಂದ ಬೆಂಗಳೂರಿಗೆ PSI ತೆರಳುತ್ತಿದ್ದ. ಮಾರ್ಗ ಮದ್ಯೆ ಜಾನಕೊಂಡ ಬಳಿ ಊಟಕ್ಕೆ ತೆರಳಿದ್ದರು. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ.
ಘಟನೆ ಕುರಿತು ಚಿತ್ರದುರ್ಗ
ಪೊಲೀಸ್ ಮೂಲಗಳಿಂದ ಮಾಹಿತಿ ನೀಡಲಾಗಿದೆ. ಈವರೆಗೆ ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.