ತಿರುವನಂತಪುರಂ: ಈ ಹಿಂದೆ ಪರೀಕ್ಷೆ ಬರೆಯಲು ಹೋಗಿದ್ದಾಗ ಅಳುತ್ತಿದ್ದ ಪುಟ್ಟ ಕಂದಮ್ಮನನ್ನ ಮಹಿಳಾ ಪೊಲೀಸ್ ಸಮಾಧಾನ ಮಾಡಿದ್ದ ಸುದ್ದಿಯನ್ನು ಓದಿದ್ದೇವೆ. ಇದೀಗ ಅಂಥದ್ದೇ ಮನಸ್ಸಿಗೆ ಮುಟ್ಟುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ಕೊಚ್ಚಿಯಲ್ಲಿ (Kochi Kerala) ಈ ಘಟನೆ ನಡೆದಿದ್ದು, ನಾಲ್ಕು ತಿಂಗಳ ಮಗುವಿಗೆ ಸ್ವತಃ ತಾವೇ ಎದೆ ಹಾಲುಣಿಸುವ ಮೂಲಕ ತಾಯಿ ಪ್ರೀತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಮಹಿಳಾ ಪೊಲೀಸ್ ಅಧಿಕಾರಿಗೆ ಇಲಾಖೆ ಮತ್ತು ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
എറണാകുളം ജനറൽ ആശുപത്രിയിൽ ഐസിയുവിൽ അഡ്മിറ്റായ പാട്ന സ്വദേശിയുടെ 4 കുട്ടികളെയാണ് നോക്കാൻ ആരും ഇല്ലാത്തതിനാൽ രാവിലെ കൊച്ചി സിറ്റി വനിതാ സ്റ്റേഷനിൽ എത്തിച്ചത്. അതിൽ 4 മാസം പ്രായമായ കുഞ്ഞിന് ഫീഡിങ് മദർ ആയ ആര്യ മുലപ്പാൽ ഇറ്റിച്ച് വിശപ്പകറ്റി ❤️❤️
കുട്ടികളെ ശിശു ഭവനിലേക്ക് മാറ്റി.. pic.twitter.com/kzcrzq0hh6
— Remya Rudrabhairav (@RMahatej) November 23, 2023
ಘಟನೆ ಏನು..?: ಬಿಹಾರ (Bihar) ಮೂಲದ ಮಗುವಿನ ತಾಯಿಗೆ ಶಸ್ತ್ರಚಿಕಿತ್ಸೆಯೊಂದು ನಡೆದಿತ್ತು. ಆ ಬಳಿಕ ಆಕೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆ ತಾಯಿಯನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪುಟ್ಟ ಕಂದಮ್ಮನ ಆರೈಕೆಗೆ ಎರ್ನಾಕುಲಂ ವನಿತಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಆರ್ಯ ಅವರು ಮುಂದಾಗಿದ್ದಾರೆ. ಸದ್ಯ ಆರ್ಯ ಅವರ ಈ ಕಾರ್ಯಕ್ಕೆ ಸಹ ಅಧಿಕಾರಿಗಳು ಮತ್ತು ಸಾರ್ವಜನಿಕರು ಭೇಷ್ ಎಂದಿದ್ದಾರೆ.
ಈ ಸಂಬಂಧ ಆ ತಾಯಿಯ 13 ವರ್ಷದ ಹಿರಿಯ ಪುತ್ರಿ ಪ್ರತಿಕ್ರಿಯಿಸಿ, ತಮ್ಮ ತಂದೆ ಜೈಲಿನಲ್ಲಿದ್ದಾರೆ. ನಾನು ಮತ್ತು ನನ್ನ ಒಡಹುಟ್ಟಿದವರು ಕ್ರಮವಾಗಿ 5 ಮತ್ತು 3 ವರ್ಷ ವಯಸ್ಸಿನ ಹುಡುಗ ಮತ್ತು ಹುಡುಗಿ, ತಾಯಿಯೊಂದಿಗೆ ಕೇರಳದಲ್ಲಿ ನೆಲೆಸಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಮಲಯಾಳಂ ಅನ್ನು ಚೆನ್ನಾಗಿ ಮಾತನಾಡುವ ಬಾಲಕಿಗೆ ಬಿಹಾರದಲ್ಲಿ ತಾವಿರುವ ಸ್ಥಳದ ಬಗ್ಗೆ ಗೊತ್ತಿಲ್ಲ ಎಂದಿದ್ದಾಳೆ. ಪೊಲೀಸರು ಅವರ ತಾಯಿಯ ಆರೋಗ್ಯ ಸ್ಥಿತಿಯ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಜೊತೆಗೆ ಬಿಹಾರದಲ್ಲಿರುವ ಅವರ ಸಂಬಂಧಿಕರ ಪತ್ತೆಗೆ ಅಲ್ಲಿನ ಪೊಲೀಸರ ನೆರವು ಪಡೆಯುತ್ತಿದ್ದಾರೆ.