ಶಿವಮೊಗ್ಗ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಸಹೋದರರಿಬ್ಬರು ಸಾವನ್ನಪ್ಪಿದ ಘಟನೆ ಭದ್ರಾವತಿ ತಾಲುಕಿನ ಹುಣಸೆಕಟ್ಟೆ ಜಂಕ್ಷನ್ ಬಳಿ ನಡೆದಿದೆ. ಗೌಳಿಗರ ಕ್ಯಾಂಪ್ ನ ನಿವಾಸಿಗಳಾದ ಬೀರ (32) ಹಾಗು ಸುರೇಶ್(35) ಸಾವನ್ನಪ್ಪಿದ ಸಹೋದರರಾಗಿದ್ದಾರೆ. ಜಮೀನಿನಲ್ಲಿ ಕಟಾವು ಮಾಡಿ ಭತ್ತವನ್ನು ಕಣದಲ್ಲಿ ರಾಶಿ ಹಾಕಲಾಗಿತ್ತು.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಗುಡುಗು ಸಿಡಿಲಿನಿಂದ ಭತ್ತದ ರಾಶಿಗೆ ಹೊದಿಕೆ ಹಾಕಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಮೀನಿಗೆ ಹೋದ ಮಕ್ಕಳು ತಡರಾತ್ರಿಯಾದ್ರೂ ಮನೆಗೆ ಬಾರದನ್ನು ಗಮನಿಸಿದ ಪೋಷಕರು ಜೀಮೀನಿಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ,ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.