ಮೈಸೂರು ಸಮೀಪದ ಚಿಕ್ಕಕಾನ್ಯ ಬಳಿ ಹುಲಿ(tiger) ಪ್ರತ್ಯಕ್ಷಗೊಂಡಿದ್ದು ಟಿವಿಎಸ್ ಪ್ಯಾಕ್ಟರಿ ಬಳಿ ಹುಲಿ ತಿರುಗಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಗ್ರಾಮದಲ್ಲಿನ ಜನರು ಭಯಭೀತರಾಗಿದ್ದಾರೆ.
ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ಪರಿಶೀಲನೆ ನಡೆಸಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಶಾಸಕರು ಹುಲಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಜಿ.ಟಿ.ಡಿ ಸೂಚನೆ.
ಜಯಪುರ ಹೋಬಳಿ ಸಿಂಧುವಳ್ಳಿ, ಬ್ಯಾತಹಳ್ಳಿ, ಚಿಕ್ಕಕಾನ್ಯ, ದೊಡ್ಡಕಾನ್ಯ ಗ್ರಾಮಗಳಲ್ಲಿ ಕಾಣಿಸಿಕೊಂಡ ಹುಲಿ. ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಅನಾವಶ್ಯಕವಾಗಿ ಓಡಾಡದಂತೆ ಮನವಿ ಕೂಡ ಮಾಡಲಾಗಿದೆ.
ಗ್ರಾಮಸ್ಥರು ಅನಾವಶ್ಯಕ ವದ್ದಂತಿಗಳಿಗೆ ಭಯಭೀತರಾಗಬಾರದು. ಹುಲಿ ಕಾರ್ಯಚರಣೆ ಮುಗಿಯುವವರೆಗೆ ಜನರು ಸಹಕರಿಸಬೇಕು. ಟಿ.ವಿ.ಎಸ್. ಕಂಪನಿಯ ನೌಕರರು ರಾತ್ರಿಪಾಳಿ ಮುಗಿಸಿ ಹೋಗುವಾಗ ಎಚ್ಚರಿಕೆಯಿಂದಿರಿ. ಹಾಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಶಾಸಕ ಜಿಟಿ ದೇವೇಗೌಡ ಮನವಿ.
ಈ ವೇಳೆ ಎ.ಸಿ.ಎಫ್. ಲಕ್ಷ್ಮಿಕಾಂತ್, ಆರ್.ಎಫ್.ಒ.ಸುರೇಂದ್ರ, ಸ್ಥಳೀಯ ಮುಖಂಡರಾದ ಗೆಜ್ಜಗಳ್ಳಿ ಲೋಕೇಶ್, ಕೃಷ್ಣ ಸಿಂಧುವಳ್ಳಿ, ಚಿಕ್ಕಕಾನ್ಯ ಮಹದೇವಸ್ವಾಮಿ, ಹಾರೋಹಳ್ಳಿ ಸುರೇಶ್ ಸೇರಿದಂತೆ ಮತ್ತಿತರರು ಹಾಜರು.