ವಾಷಿಂಗ್ಟನ್: ನೋಬೆಲ್ ಶಾಂತಿ ಪುರಸ್ಕೃತ ಹಾಗು ಅಮೇರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ, ರಾಜತಾಂತ್ರಿಕ ಹೆನ್ರಿ ಕಿಸಿಂಜರ್ ನಿಧರಾಗಿದ್ದಾರೆ.
ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು ರಿಚರ್ಡ್ ನಿಕ್ಸನ್ ಮತ್ತು ಜೆರಾಲ್ಡ್ ಫೋರ್ಡ್ (ಅಮೆರಿಕಾದ ಮಾಜಿ ಅಧ್ಯಕ್ಷರು) ಅವಧಿಯಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಜರ್ಮನ್ ಮೂಲದವರಾದ ಕಿಸ್ಸಿಂಜರ್ ಅವರ ಮನೆಯಲ್ಲಿ ಬುಧವಾರ ನಿಧನರಾದರು ಎಂದು ರಾಜಕೀಯ ಸಲಹಾ ಸಂಸ್ಥೆ ಕಿಸ್ಸಿಂಜರ್ ಅಸೋಸಿಯೇಟ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಹೆನ್ರಿ ಕಿಸಿಂಜರ್ 1923ರಲ್ಲಿ ಜರ್ಮನಿಯಲ್ಲಿ ಜನಿಸಿದರು. 1938ರಲ್ಲಿ ಕಿಸ್ಸಿಂಜರ್ ಕುಟುಂಬದೊಂದಿಗೆ ಅಮೆರಿಕಾಕ್ಕೆ ಬಂದು ನೆಲೆಸಿ, 1943ರಲ್ಲಿ ಅಲ್ಲಿನ (ಅಮೆರಿಕಾ) ಪೌರತ್ನ ಪಡೆದರು. ಬಳಿಕ ಯುಎಸ್ ಸೈನ್ಯದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಕೌಂಟರ್ ಇಂಟೆಲಿಜೆನ್ಸ್ ಕಾರ್ಪ್ಸ್ನಲ್ಲಿ ಸೇವೆ ಸಲ್ಲಿಸಿದರು.
1969ರಲ್ಲಿ, ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್, ಕಿಸ್ಸಿಂಜರ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಿದರು. ಇದು ಯುಎಸ್ ವಿದೇಶಾಂಗ ನೀತಿಯ ಮೇಲೆ ಅಗಾಧವಾದ ಪ್ರಭಾವ ಬೀರಿತು.
100 ವರ್ಷ ವಯಸ್ಸಾದರೂ ಸಕ್ರಿಯರಾಗಿದ್ದ ಕಿಸ್ಸಿಂಜರ್, ಶ್ವೇತಭವನದ ಮೇಲೆ ಪ್ರಭಾವ ಬೀರುವಷ್ಟು ಹಿಡಿತ ಸಾಧಿಸಿದ್ದರು.