ಬಾಲಿವುಡ್ ನ ಖ್ಯಾತನಟ ರಣ್ ದೀಪ್ ಹೂಡಾ (Randeep Hooda) ನಿನ್ನೆಯಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಹಾಗೂ ಮಾಡೆಲ್ ಆಗಿರುವ ಲಿನ್ ಲೈಸ್ರಾಮ್ (Lin Laisram) ಜೊತೆ ಅವರು ದಾಂಪತ್ಯ (Marriage) ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಜೋಡಿಯ ಮದುವೆ ಮಣಿಪುರ ಸಂಪ್ರದಾಯದಂತೆ ನಡೆದಿದ್ದು, ಮದುವೆಯ ಫೋಟೋಗಳನ್ನು ರಣ್ ದೀಪ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಧು ವರರಿಗೆ ಹಾರೈಸಿ ಎಂದು ಕೇಳಿದ್ದಾರೆ. ಮಣಿಪುರದ ಮೈಥಿಯಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ರಣ್ ದೀಪ್ ಕ್ರೀಮ್ ಬಣ್ಣದ ಧಿರಿಸಿನಲ್ಲಿ ಮಿಂಚುತ್ತಿದ್ದರು.
ಮಾಡೆಲ್ ಲಿನ್ ಮೂಲತಃ ಮಣಿಪುರದವರು ಆಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಜೊತೆಗೆ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಹೂಡಾಗೆ 47 ವರ್ಷ ವಯಸ್ಸಾಗಿದ್ದರೂ, ಮಣಿಪುರದ ಬೆಡಗಿ ಮೆಚ್ಚಿ ಮದುವೆಯಾಗಿದ್ದಾರೆ ಎನ್ನುವುದು ವಿಶೇಷ.