ದೆಹಲಿ: ಲಂಡನ್ನಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದ (Air India Flight) ಒಳಗಡೆ ನೀರು ಸೋರಿಕೆಯಾಗಿರುವ (Water Leaking) ಪ್ರಸಂಗ ನಡೆದಿದೆ. ಈ ಅನಿರೀಕ್ಷಿತ ಘಟನೆಯಿಂದ ಪ್ರಯಾಣಿಕರಿಗೆ ಅನಾನುಕೂಲವಾಗಿದ್ದು, ಇದಕ್ಕೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ.
https://x.com/baldwhiner/status/1729856754068959379?s=20
ಘಟನೆಗೆ ಸಂಬಂಧಿಸಿದಂತೆ ಎಕ್ಸ್ನಲ್ಲಿ ವ್ಯಕ್ತಿಯೊಬ್ಬರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಮೇಲಿರುವ ಹ್ಯಾಂಡ್ ಬ್ಯಾಗೇಜ್ ಸಂಗ್ರಹದಿಂದ ನೀರು ಹೇಗೆ ಸೋರಿಕೆಯಾಗುತ್ತಿತ್ತು ಎಂಬುದು ವೀಡಿಯೋದಲ್ಲಿ ಕಂಡುಬಂದಿದೆ.
ಈ ಬಗ್ಗೆ ಬರೆದಿರುವ ಪ್ರಯಾಣಿಕ, ಏರ್ ಇಂಡಿಯಾ.. ನಮ್ಮೊಂದಿಗೆ ಪ್ರಯಾಣಿಸಿ. ಇದು ಪ್ರಯಾಣವಲ್ಲ, ನಮ್ಮನ್ನು ತಲ್ಲೀನಗೊಳಿಸುವ ಅನುಭವ ಎಂದು ತಮಗಾದ ಅನಾನುಕೂಲತೆಯನ್ನು ತಿಳಿಸಿದ್ದಾರೆ.