ಬೆಂಗಳೂರು:- ನಿಗಮ ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರಿಗೆ ಸ್ಥಾನ ಸಿಗಲಿ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಹೊಸಬರಿಗೆ ನಿಗಮ-ಮಂಡಳಿಯಲ್ಲಿ ಅವಕಾಶ ಇಲ್ಲವೇ ಇಲ್ಲ. ಮೂರ್ನಾಲ್ಕು ಬಾರಿ ಗೆದ್ದವರಿಗೆ ಅವಕಾಶ ನೀಡಲು ಪಕ್ಷ ಬದ್ಧವಾಗಿದೆ. ನಮ್ಮ ಜಿಲ್ಲೆಯಲ್ಲೂ ಎರಡ್ಮೂರು ಹಿರಿಯ ಶಾಸಕರಿದ್ದಾರೆ. ಅವರಿಗೆ ನಿಗಮ – ಮಂಡಳಿಯಲ್ಲಿ ಅವಕಾಶ ಕೊಟ್ಟೇ ಕೊಡುತ್ತಾರೆ. ಸದನ ಪ್ರಾರಂಭವಾಗುವುದಕ್ಕೆ ಮೊದಲೇ ನೇಮಕವಾದರೆ ಉತ್ತಮ. ಹಿರಿಯರಿಗೆ ಕೊಟ್ಟರೆ ಭಿನ್ನಮತಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದರು.
ನಾನು ಕೂಡ ಕಾರ್ಯಕರ್ತರ ಪರವಾಗಿ ಒತ್ತಾಯ ಮಾಡಿದ್ದೇನೆ. ಕಾರ್ಯಕರ್ತರೇ ಪಕ್ಷ ಸಂಘಟನೆಗೆ ಮುಖ್ಯ ಪಾತ್ರ ವಹಿಸುತ್ತಾರೆ. ಯಾವತ್ತೂ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಬೆಳಗಾವಿಯಲ್ಲಿ ಚರ್ಚೆಯಾಗಿಲ್ಲ. ಈ ಬಾರಿಯಾದರೂ ಅವಕಾಶ ಸಿಗುತ್ತದೋ ಎಂದು ಕಾದು ನೋಡಬೇಕು ಎಂದರು.