ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಗರೇಟಿಗೊಂದು ಸೀಕ್ರೇಟ್ ರೂಮ್ (Cigarettes Secret Room) ಮಾಡಿ, ನಕಲಿ ವಿದೇಶಿ ಬ್ರ್ಯಾಂಡೆಡ್ ಸಿಗರೇಟ್ಗಳನ್ನ ಮಾರಾಟ ಮಾಡ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದಾರೆ.
ಆರೋಗ್ಯ ಸೇವೆ: ನೂತನ 262 ಅಂಬುಲೆನ್ಸ್ಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ!
ವಿದೇಶಿ ಸಿಗರೇಟ್ಗಳನ್ನ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಹಿಂಭಾಗದ ರಸ್ತೆಯ ಗೊಡೌನ್ನಲ್ಲಿದ್ದ ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್ಗಳನ್ನ ಸಿಸಿಬಿ ಆರ್ಥಿಕ ಅಪರಾಧ ದಳದ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಅಂಡ್ ಟೀಂ ಪತ್ತೆ ಮಾಡಿದೆ. ಬಳಿಕ ಗೊಡೌನ್ ಸೀಜ್ ಮಾಡಿದೆ.
ಲೈಟರ್ ಗೊಡೌನ್ನಲ್ಲಿ ಮಾಡಿಸಿದ್ದ ವುಡ್ ಶೆಲ್ಫ್ ನಲ್ಲೇ ಸೀಕ್ರೇಟ್ ರೂಮ್ಗೆ ದಾರಿ ಮಾಡಿಡಲಾಗಿತ್ತು. ಕಿಚನ್ ಕಬೋರ್ಡ್ನಂತೆ ಸಣ್ಣ ಕಿಂಡಿಯಷ್ಟು ಡೋರ್ ಇಡಲಾಗಿತ್ತು. ಒಂದು ವೇಳೆ ಪೊಲೀಸರು ಬಂದರೂ ಗೊತ್ತಾಗದ ರೀತಿ ಡೋರ್ ಮಾಡಿಸಿದ್ದ ಗೋಡೋನ್ ಮಾಲೀಕ ಲಲಿತ್, ವಿದೇಶಿ ಬ್ರಾಂಡೆಡ್ಗಳ ಹೆಸರಲ್ಲಿ ನಕಲಿ ಸಿಗರೇಟ್ ಮಾರಾಟ ಮಾಡುತ್ತಿದ್ದರು