ಚಾಮರಾಜನಗರ: ಹುಡುಗರಿಗೆ ಹುಡುಗಿಯರೆ ಸಿಗದ ಈ ಕಾಲದಲ್ಲಿ ವಿದ್ಯಾವಂತೆ ಹಾಗೂ ಸ್ಪುರದ್ರೂಪಿ ಹುಡುಗಿಯನ್ನು ಗ್ರಾಂಡಾಗಿ ಮದುವೆ ಮಾಡಿಕೊಟ್ರೆ ಇಲ್ಲೊಬ್ಬ ಹಣಬಾಕ, ತನ್ನ ಪತ್ನಿಗೆ ಕೊಡಬಾರದ ಚಿತ್ರ ಹಿಂಸೆ ನೀಡಿ ಸಾವಿನ ಮನೆಗೆ ದೂಕಿರುವ ಘಟನೆ ನಡೆದಿದೆ ಅದು ಎಲ್ಲಿ ಅಂತೀರಾ ನೋಡಿ ಈ ಸ್ಟೋರಿನಾ… ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ 26 ವರ್ಷದ ಸ್ವಾತಿ ಗಂಡನ ಹಣ ದಾಹಕ್ಕೆ ಬಲಿಯಾದ ಸುಂದರ ಯುವತಿಯಾಗಿದ್ದಾಳೆ. ಸ್ವಾತಿ ಎಂ.ಎಸ್ಸಿತಿ ಓದಿದ್ದ ವಿದ್ಯಾವಂತೆ ಸ್ಪುರದ್ರೂಪಿಯಾಗಿದ್ದ ಆಕೆ ನೂರಾರು ಕನಸು ಹೊತ್ತಿದ್ಲು.
ಸರಳ ಹಾಗೂ ಮಿತಬಾಷಿ ಹಾಗೂ ಉತ್ತಮ ಗುಣಗಳುಳ್ಳ ಹುಡುಗಿಯಾಗಿದ್ಲು. ಮದುವೆಗೆ ಮುಂಚೆ ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಾ ಇದ್ಲು. ಕಳೆದ 7 ತಿಂಗಳ ಹಿಂದೆ ಹಂಗಳ ಗ್ರಾಮದ ವಿನಯ್ ಎಂಬಾತ ತಾನು ಇಂಜಿನಿಯರ್ ತಿಂಗಳಿಗೆ ಲಕ್ಷ ಸಂಬಳ ಬರುತ್ತೆ ಎಂದು ಸ್ಚಾತಿ ಮನೆಯವರಿಗೆ ನಂಬಿಸಿದ್ದ . ಆದರೆ ನಿಶ್ಚಿತಾರ್ಥ ಮಾಡುವಾಗ ಆತ ಬಿ.ಕಾಂ. ಓದಿರುವುದಾಗಿ ಕಾರ್ಡನಲ್ಲಿ ಬರೆಸಿರುವುದನ್ನು ನೋಡಿ ಸ್ವಾತಿ ಮನೆಯವರು ಪ್ರಶ್ನೆ ಮಾಡಿದ್ದಾರೆ.
ಹುಡುಗಿ ನೋಡಲು ಬಂದಾಗ ಇಂಜಿನಿಯರ್ ಎಂದು ಹೇಳಿದ್ದೆ ಈಗ ನೋಡಿದ್ರು ಬಿ.ಕಾಂ.ಅಂತ ಬರೆಸಿದ್ದೀಯಾ ಎಂದು ಕೇಳಿದ್ದಾರೆ. ಅಲ್ಲಿಂದಲೆ ಶುರುವಾಯ್ತು ನೋಡಿ ಹಣಬಾಕನ ಅಸಲಿ ಖಾರಮತ್ತು, ಸಿಡಿಮಿಡಿಗೊಂಡ ವಿನಯ್ ಅಂದೆ ಗಲಾಟೆ ಮಾಡಿದ್ದಾನೆ. ಆದರೆ ಹುಡುಗಿ ಮನೆಯವರು ಮರ್ಯಾದೆ ಹೋಗುತ್ತೆ ಅಂತ ಬಾಯಿಮುಚ್ಚಿಕೊಂಡು ನಿಶ್ಚಿತಾರ್ಥ ಮಾಡಿ ಮುಗಿಸಿದ್ದಾರೆ. ಮದುವೆ ಗ್ರಾಂಡಾಗಿ ನಡೆಲೇ ಬೇಕು ಅಂತ ವಿನಯ್ ಹಠ ಹಿಡಿದಿದ್ನಂತೆ ಅದಕ್ಕೆ ಹುಡುಗಿ ತಂದೆ ತಾಯಿ ಸಾಲ ಮಾಡಿ 10 ಲಕ್ಷ ರೂಪಾಯಿಯನ್ನು ವಿನಯ್ ಕೈಯಿಗೆ ನೀಡಿ ನಿನಗಿಷ್ಟವಾದ ರೀತಿಯಲ್ಲಿ ಅರೆಂಜ್ ಮಾಡಿಕೋ ಎಂದು ಹೇಳಿದ್ರಂತೆ.
ಆದರೂ ಕೂಡ ಮದುವೆ ದಿನ ಸ್ವಾತಿ ಗಂಡ ವಿನಯ್ ಪ್ರತಿಯೊಂದಕ್ಕೂ ತಕರಾರು ಎತ್ತುತ್ತಾ ಇದ್ನಂತೆ ಕಾರಿಗೆ ಡೆಕೊರೇಷನ್ ಸರಿಯಾಗಿ ಮಾಡಿಲ್ಲ, ಹುಡುಗಿಗೆ ಸರಿಯಾಗಿ ಅಲಂಕಾರ ಮಾಡಿಲ್ಲ ಅಂತ ತಗಾದೆ ತೆಗೆದಿದ್ನಂತ ಅಂತೂ ಇಂತೂ ಹುಡುಗಿ ಮನೆಯವರು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯಾದ ನಂತರ ಶುರುವಾಯ್ತು ನೋಡ್ರೀ ಸ್ವಾತಿ ಗಂಡ ವಿನಯನ ಅಸಲಿ ಆಟ. ಮುಗ್ದ ಹುಡುಗಿಯಾಗಿದ್ದ ಸ್ವಾತಿಯನ್ನು ಆಕೆಯ ತಂದೆ ಮನೆ ಬೇಗೂರಲ್ಲಿ ಫಸ್ಟ್ ನೈಟ್ಮಾಡಿಕೊಂಡು ಮಾರನೆ ದಿನವೇ ಆಕೆಯ ಎಲ್ಲಾ ಚಿನ್ನ ಹಾಗೂ ಬೆಲೆಬಾಳುವ ವಸ್ತುಗಳನ್ನು ತುಂಬಿಸಿಕೊಂಡು ಬೆಂಗಳೂರಲ್ಲಿ ಮನೆ ಮಾಡ್ತೀನಿ ಅಂತ ಹೋದವನು ಗುಂಡ್ಲುಪೇಟೆಯಲ್ಲಿ ಮನೆ ಮಾಡಿದ್ದಾನೆ ಅಲ್ಲಿ ಆಕೆಯನ್ನು ಜೈಲಿನಲ್ಲಿಟ್ಟಂತೆ ಆಕೆಯನ್ನು ಇಟ್ಟಿದ್ದ….!?
ಆಕೆ ತಂದೆಯ ಮನೆಯವರನ್ನು ಮಾತನಾಡಿಸುವಂತಿಲ್ಲ ಸ್ನೇಹಿತರನ್ನು ಮಾತನಾಡಿಸುವಂತಿಲ್ಲ ಎಂದು ಆಕೆಯ ಫೋನ್ ಹಾಳು ಮಾಡಿದ್ದ ಆಕೆಗೆ ಅವಾಚ್ಯ ಶಬ್ದದಿಂದ ಬಯೋದು ದೈಹಿಕ ಹಿಂಸೆ ನೀಡೋದು ಸೇರಿದಂತೆ ಆಕೆಯನ್ನು ಮನಬಂದಂತೆ ಹೀಯಾಳಿಸೋದನ್ನು ಪ್ರತಿನಿತ್ಯ ರೂಡಿ ಮಾಡಿಕೊಂಡಿದ್ದನಂತೆ , ಅದಕ್ಕೆ ಅತ್ತೆ ನಂದಿನಿ ಕೂಡ ಸಾಥ್ ನೀಡ್ತಾ ಇದ್ಲಂತೆ. ಪ್ರತಿನಿತ್ಯ ಗಂಡ ಹಾಗೂ ಅತ್ತೆ ನೀಡ್ತಾ ಇದ್ದಂತ ಕಾಟದಿಂದ ಆಕೆ ತೀವ್ರವಾಗಿ ಮನನೊಂದಿದ್ಲು.
ನೋವನ್ನು ಅಮ್ಮನ ಬಳಿ ತೋಡಿಕೊಂಡ್ರೂ ಅದುಕ್ಕೂ ಚಿತ್ರ ಹಿಂಸೆ ನೀಡ್ತಾ ಇದ್ನಂತೆ , ನಿನ್ನ ಮನೆಯವವರು ಲಕ್ಷಲಕ್ಷ ಕೊಟ್ಟಿದ್ದಾರಾ ನಿನ್ನ ರಾಣಿಯಂಗೆ ನೋಡಿಕೊಳ್ಳೇಕೆ ಹೋಗಿ ಹಣ ಇಸ್ಕೋಂಡ ಬಾ ಅಂತ ಹೊಡಿತಾ ಇದ್ನಂತೆ. ಅಷ್ಟೂ ಸಾಲದು ಎಂಬಂತೆ ಮನೆಯಿಂದ ಹೊರಗೆ ಹೋಗಬೇಡ ಅಕ್ಕಪಕ್ಕದವರ ಬಳಿ ಮಾತಾಡಬೇಡ ಅದರಲ್ಲೂ ನಿನ್ನ ಅಮ್ಮನ ಬಳಿ ಮಾತಾಡಿದ್ರೆ ಸಾಯಿಸಿಬಿಡ್ತೀನಿ ಅಂತ ಧಮಕಿ ಹಾಕ್ತಾ ಇದ್ನಂತೆ ಇಂತಹ ನರರೂಪದ ಗಂಡನ ಸಹವಾಸ ಸ್ವಾತಿಗೆ ಮದುವೆಯಾದ ಏಳೆ ತಿಂಗಳಿಗೆ ಸಾಕಾಗಿ ಹೋಗಿತ್ತು.
ಸ್ವಾತಿಗೆ ಚಿತ್ರ ಹಿಂಸೆ ನೀಡ್ತಾ ಇದ್ದ ವಿಚಾರ ತಿಳಿದ ತಂದೆ ಸುರೇಶ ಹಾಗೂ ತಾಯಿ ಮಂಜುಳಾ ಅಳಿಯನ ಮನೆಗೆ ತೆರಳಿ ಹಲವು ಬಾರಿ ಬೈಯ್ದು ಬುದ್ದಿ ಹೇಳಿದ್ದಾರೆ . ಅಳಿಯನ ವರ್ತನೆಯಿಂದ ಬೇಸತ್ತು ಮದುವೆ ಮಾಡಿಸಲು ಮದ್ಯಸ್ಥಿಕೆ ವಹಿಸಿದ್ದ ತಗ್ಗಲೂರು ಗ್ರಾಮದ ಮಹದೇವಪ್ಪ ಎಂಬಾತನನ್ನು ಭೇಟಿ ಮಾಡಿ ಅಳಿಯ ವಿನಯ್ ಕರ್ಮಕಾಂಡವನ್ನು ತಿಳಿಸಿ ಮಗಳನ್ನು ಸರಿಯಾಗಿ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಅಷ್ಟೆ ಶುರುವಾಯ್ತು ನೋಡ್ರಿ ಅಳಿಯನ ಟಾರ್ಚರ್.
ಅಳಿಯನ ಚಿತ್ರ ಹಿಂಸೆಯ ಬಗ್ಗೆ ಮದುವೆ ಮಾಡಿಸಿದ ವ್ಯಕ್ತಿಗೆ ತಿಳಿಸಿದಾಗಿನಿಂದ ಸ್ವಾತಿ ತಾಯಿ ಮಂಜುಳಾರನ್ನು ಕಂಡ್ರೆ ಸಿಡಿಮಿಡಿಯಾಡ್ತಾ ಇದ್ದ ವಿನಯ್ ಮನೆಗೆ ಬಂದ ಅತ್ತೆಯನ್ನು ಕಾಲಿಗೆ ಬೀಳಿಸಿ ತಪ್ಪಾಯ್ತು ಅಂತ ಹೇಳಿಸಿದ್ನಂತೆ ಸಾಲದೂ ಎಂಬಂತೆ ಕಾಲಿನಿಂದ ಅತ್ತೆಯನ್ನೆ ಒದ್ದು ಅವಮಾನ ಮಾಡದ್ನಂತೆ. ಅಷ್ಟೂ ಸಾಲದೂ ಎನ್ನುವಂತೆ ಯಾವುದೇ ಕಾರಣಕ್ಕೂ ಅತ್ತೆ ಮಾವ ಮನೆಗೆ ಬರಬಾರದು ಫೋನಿನಲ್ಲಿ ಮಾತನಾಡಬಾರದು ಅಂತ ಚಿತ್ರ ಹಿಂಸೆ ನೀಡ್ತಾ ಇದ್ನಂತೆ.
ಇವೆಲ್ಲಾ ಚಿತ್ರ ಹಿಂಸೆ ನೀಡ್ತಾ ಇದ್ರೂ ಕೂಡ ಸ್ವಾತಿ ಸಂಬಂಧಿಕರಿಗೆ ಗೊತ್ತಾದ್ರೆ ಅವಮಾನ ಆಗುತ್ತೆ ಅಂತ ಯಾರಿಗೂ ಹೇಳದೆ ನೋವನ್ನು ನುಂಗಿಕೊಂಡಿದ್ಲು. ತಾಯಿ ಜೊತೆ ಪಕ್ಕದ ಮನೆಯವರ ಫೋನಿನಲ್ಲಿ ಮಾತಾಡಿ ಗಂಡ ವಿನಯ್ ನೀಡುತ್ತಿದ್ದ ಚಿತ್ರಹಿಂಸೆಯನ್ನು ತೋಡಿಕೊಂಡಿದ್ಲು. ಇಂತಹವನಿಗೆ ಯಾಕಾದ್ರೂ ಮದುವೆ ಮಾಡಿಕೊಡ್ರಿ ಅಂತ ತಾಯಿ ಬಳಿ ತೋಡಿಕೊಂಡಿದ್ಲು ತಾಯಿ ಜೊತೆ ಸಂಭಾಷಣೆ ಮಾಡಿರೋ ಆಡಿಯೋ ಇದೀಗ ಲಭ್ಯವಾಗಿದೆ.
ದಿನೇದಿನೇ ಗಂಡನ ಟಾರ್ಚರ್ ಹೆಚ್ಚಾಗ್ತಾ ಇದ್ದಂತೆ ಕಾರ್ತಿಕ ಸೋಮವಾರ ಹುಣ್ಣಿಮೆ ದಿನ ತಾಯಿಗೆ ಫೋನ್ ಮಾಡಿ ನನಗೆ ಗಂಡನ ಟಾರ್ಚರ್ ಸಾಕಾಗಿ ಹೋಗಿದೆ ನಾನು ಸತ್ತೋಗ್ತೀನಿ ಅಂತ ತಾಯಿ ಜೊತೆ ನೋವು ತೋಡಿಕೊಂಡಿದ್ದಾಳೆ ,ಅಷ್ಟಕ್ಕೆ ತಾಯಿ ಸಮಧಾನ ಮಾಡಿ ಮನೆಗೆ ಬಂದು ಬಿಡು ನೀನು ಏನೂ ಅನಾಹುತ ಮಾಡಿಕೊಳ್ಳಬೇಡ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಆದರೆ ಮದ್ಯಾಹ್ನ ಸುಮಾರು 3 ಗಂಟೆ ವೇಳೆಯಲ್ಲಿ ದರ್ಶನ ಲೇಔಟಿನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾತಿ ಮೃತ ದೇಹ ಪತ್ತೆಯಾಗಿತ್ತು.
ಮೃತ ಸ್ವಾತಿ ಕತ್ತಿಗೆ ಹಾಕಿಕೊಂಡಿದ್ದ ಚಿನ್ನದ ತಾಳಿ ಸರ ಕಾಲಿನ ಚೈನು ಮಾಯವಾಗಿತ್ತು. ವಿನಯ್ ಹಣದ ದಾಹ ಎಷ್ಟಿತ್ತು ಅಂದ್ರೆ ಸ್ವಾತಿ ಮೃತ ಪಟ್ಟಿದ್ರು ಆಕೆಯ ತಾಳಿಯ ಚಿನ್ನದಚೈನು ಸೇರಿದಂತೆ ಕಾಲು ಚೈನನ್ನು ಕಳೆದುಕೊಂಡು ಆರ್ಟಿಫಿಸಿಯಲ್ ತಾಳಿ ಹಾಕಿದ್ದ ಅಫಿ ಗಂಡ. ಮೃತ ಸ್ವಾತಿ ಬರೆದಿಟ್ಟಿದ್ದಳು ಎನ್ನಲಾದ ಡೆತ್ ನೋಟ್ ಮನೆಯಲ್ಲಿ ಸಿಕ್ಕಿದ್ದು ಆಕೆಯ ಬರವಣಿಗೆಗೂ ಡೆತ್ ನೋಟ್ ಬರವಣಿಗೆಗೂ ಬಾರೀ ವ್ಯಾತ್ಯಾಸವಿದೆ ಎಂದು ಪೋಷಕರು ಹಾಗೂ ಸಂಬಂಧಿಕರು ಇದೀಗ ಅನುಮಾನ ವ್ಯಕ್ತಪಡಿಸಿದ್ದಾರೆ.
ಗಂಡ ವಿನಯ್ ತನ್ನಮೇಲೆ ತಪ್ಪು ಬರಬಾರದು ಎಂದು ತಾನೇ ಡೆತ್ ನೋಟದ ಬರೆದು ಏಮಾರಿಸಿದ್ದಾನೆ ಎಂಬುದು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳಕ್ಕೆ ಪೋಲೀಸರು ತೆರಳಿ ಮಹಜರು ನಡೆಸಿ ಕೂಡಲೆ ಆರೋಪಿಗಳಾದ ಸ್ವಾತಿ ಗಂಡ ವಿನಯ್ ಹಾಗೂ ಅತ್ತೆ ನಂದಿನಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ನಂತರ ನಗರದ ಸಿಮ್ಸ್ ಆಸ್ಪತ್ರೆಗೆ ಮೃತ ದೇಹ ರವಾನಿಸಿದ್ರು. ಸಿಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಒಟ್ಟಾರೆ ಬಾಳಿ ಬದುಕಬೇಕಾದ ಮುಗ್ದ ಯುವತಿ ಸುಂದರ ಹುಡುಗಿಯ ಬದುಕು ಹಣಬಾಕರ ಕೈಗೆ ಸಿಕ್ಕಿ ಬದುಕು ಅಂತ್ಯವಾಗಿರೋದು ಮಾತ್ರ ಮನಕಲಕುವಂತಾಗಿದೆ.