‘ಕಾಟೇರ’ ಬರ್ತಾ ಇದಾನೆ ಕಂಡ್ರೋ.. ಇನ್ನೇನು ಬೇಕು? Happy New Year ಗಿಫ್ಟ್ ಸಿಕ್ತಲ್ಲ. ಕಾಟೇರಮ್ಮನ ಮಗನಾಗಿ ದುಷ್ಟರ ಸಂಹಾರಕ್ಕಾಗಿ ‘ಕಾಟೇರ’ ಸಿದ್ಧವಾಗಿದ್ದಾನೆ.
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರು ನಟಿಸಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ‘ಕಾಟೇರ’ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.
ಕಾಟೇರದಲ್ಲಿ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿರುವ ‘ಡಿ ಬಾಸ್’ ತಮ್ಮ ಅಭಿಮಾನಿಗಳಿಗೆ ಹಬ್ಬದೂಟ ಉಣಬಡಿಸಲು ಮುಂದಾಗಿದ್ದಾರೆ. ಈ ಸಿನಿಮಾ ಡಿಸೆಂಬರ್ 29ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.
ಈ ಸಿನಿಮಾದಲ್ಲಿ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಕಾಟೇರವನ್ನು ನಿರ್ದೇಶಿಸಿದ್ದಾರೆ. ಇನ್ನೂ ಧೀರ ರಾಕ್ಲೈನ್ ವೆಂಕಟೇಶ್ ಅವರು ಕಾಟೇರಗೆ ಬಂಡವಾಳ ಹೂಡಿದ್ದಾರೆ.
ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಆಗುತ್ತಾ ಕಾಟೇರ
ಈ ವರ್ಷ ಸ್ಯಾಂಡಲ್ ವುಡ್ಗೆ ಅಷ್ಟೇನು ಆಶಾದಾಯಕವಾಗಿರಲಿಲ್ಲ. ಯಾವ ಸಿನಿಮಾ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಅನಿಸ್ಕೊಂಡಿರಲ್ಲ. ವರ್ಷದ ಕೊನೆಯಲ್ಲಿ ಕಾಟೇರ ಮೂಲಕ ಬಾಕ್ಸ್ ಆಫೀಸ್ಗೆ ನಿಜವಾದ ಸ್ಪಾರ್ಕ್ ಸಿಗುವಂತಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.