ಬೆಂಗಳೂರು: ಈಗಾಗಲೇ ಮದುವೆ ಸೀಜನ್ಸ್ ಆರಂಭವಾಗಿದ್ದು, ಸಾಕಷ್ಟು ಮದುವೆಗಳು ನಡೆಯುತ್ತಿವೆ. ಆದರೆ ಈ ಸಮಯದಲ್ಲೇ ಜನರಿಗೆ ಗೋಲ್ಡ್ ಶಾಕ್ ಎದುರಾಗಿದೆ. ಅದು ಸಹ ಇತಿಹಾಸದಲ್ಲೇ ಪ್ರಥಮ ಬಾರಿಗೆ ಗರಿಷ್ಠ ಬೆಲೆಗೆ ಚಿನ್ನ (Gold) ಏರಿಕೆಯಾಗಿದೆ.
ಚಿನ್ನ ಕಷ್ಟಕಾಲದ ಆಪದ್ಬಾಂಧವ. ಮಹಿಳೆಯರ ಪಾಲಿಗೆ ಫೇವರೆಟ್. ಆದರೆ ಈ ಚಿನ್ನವನ್ನು ಕೊಳ್ಳುವ ಹಾಗಿಲ್ಲ, ಮುಟ್ಟುವ ಹಾಗಿಲ್ಲ ಎನ್ನುವಂತಾಗಿದೆ. ಬಡವರು ಹಾಗೂ ಮಧ್ಯಮ ವರ್ಗದ ಜನರ ಪಾಲಿಕೆ ಗಗನ ಕುಸುಮವಾಗಿದೆ. ಅದರಲ್ಲೂ ಬಂಗಾರ 65,000 ರೂ.ಗಳ ಗಡಿ ದಾಟಿದ್ದು, ಬೆಳ್ಳಿ 78,000 ರೂ. ದಾಟಿದೆ.
ಬುಧವಾರದ ಚಿನ್ನ, ಬೆಳ್ಳಿಯ ದರವನ್ನು ನೋಡುವುದಾದರೆ, 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 65,000 ರೂ., 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 58,500 ರೂ., ಒಂದು ಕೆಜಿ ಬೆಳ್ಳಿಗೆ 78,500 ಸಾವಿರ ರೂ. ಇತ್ತು. ಗುರುವಾರವೂ ಈ ದರ ಮುಂದುವರಿದಿದೆ.
ಈಗ ಮದುವೆ ಸೀಜನ್ ಆಗಿರುವುದರಿಂದ ಚಿನ್ನಕ್ಕೆ ಬೇಡಿಕೆಯಿದೆ. ಮುಂದೆ ಕ್ರಿಸ್ಮಸ್, ಹೊಸ ವರ್ಷ ಪ್ರಾರಂಭವಾಗುವುದರಿಂದ ಈ ರೇಟ್ ಮುಂದುವರೆಯಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಮಾಲೀಕರು ಹೇಳುತ್ತಿದ್ದಾರೆ