ಬಳ್ಳಾರಿ :- ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬಳ್ಳಾರಿ ತಾಲೂಕಿನ ಹಲಕುಂದಿ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಮಳೆ ಇಲ್ಲದೇ ಒಣಗಿರುವ ತೊಗರಿ,ಸೂರ್ಯಕಾಂತಿ ಜೋಳ ಬೆಳೆಹಾನಿ ಪರಿಶೀಲಿಸಿದರು.
ಹಾಗೂ ಇದೇ ವೇಳೆ ಕೃಷಿ ಅಧಿಕಾರಿಗಳು ಹಾಗೂ ರೈತರಿಂದ ಸಚಿವರು ಮಾಹಿತಿ ಪಡೆದರು. ಪ್ರತಿ ರೈತರಿಗೆ ಪ್ರೂಟ್ಸ್ ತಂತ್ರಾಂಶ ಮೂಲಕ ಪರಿಹಾರ ನೀಡಲು ಅನುಕೂಲವಾಗುತ್ತದೆ, ಪ್ರತಿ ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರಿ. ಸರ್ಕಾರ ನೀಡುವ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ಯಾವೊಬ್ಬ ರೈತನನ್ನು ಕಡೆಗಣನೆ ಮಾಡಬಾರದು ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೇ ವೇಳೆ ಕೃಷಿ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಸಾಥ್ ನೀಡಿದ್ದಾರೆ.