ಬಳ್ಳಾರಿ:- ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿರುವ ಬಗ್ಗೆ ಸಚಿವ ನಾಗೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಡಿಕೆ ಶಿವಕುಮಾರ್ ಅವರ ಕೇಸ್ ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ. ಆ ಕೇಸ್ ಗಳು ಸೂಕ್ತ ರೀತಿಯಲ್ಲಿ ಆಗಿಲ್ಲ. ಸ್ಪೀಕರ್ ಅವರ ಪರ್ಮಿಷನ್ ತೆಗೆದುಕೊಂಡಿಲ್ಲ. ಅವತ್ತಿನ ಸಂದರ್ಭದಲ್ಲಿ ಡಿಕೆಶಿ ಅವರನ್ನ ಒಳಗೆ ಹಾಕಿದ್ರೆ ಸಾಕು ಎನ್ನುವಂತೆ ಇತ್ತು. ಹೀಗಾಗಿ ತರಾತುರಿಯಲ್ಲಿ ನಿಯಮ ಪಾಲಿಸದೇ ಯಡವಟ್ಟು ಮಾಡಿದ್ದಾರೆ. ಹೀಗಾಗಿ ನಾವು ಈಗ ಪರಿಶೀಲಿಸಿ, ಅಡ್ವಕೇಟ್ ಜನರಲ್ ಅವರ ಬಳಿ ಲೀಗಲ್ ಒಪಿನಿಯನ್ ಪಡೆದು ಮುಂದುವರೆದಿದ್ದೇವೆ’ ಎಂದು ನಾಗೇಂದ್ರ ಅವರು ತಿಳಿಸಿದ್ದಾರೆ.
ಜನಾರ್ದನ ರೆಡ್ಡಿ ಅವರ ಹೇಳಿಕೆ ನೋಡಿದ್ದೇನೆ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನಾನು ಆ ಪ್ರಕರಣದಲ್ಲಿ ಹೊರ ಬರ್ತೀನಿ. ಒಬ್ಬ ಆರೋಪಿ ನನ್ನ ಮೇಲೆ ಆರೋಪ ಮಾಡಿದ್ದಾನೆ. ಇದು ರಾಜಕೀಯ ಪ್ರೇರಿತವಾಗಿ ನಡೆದಿದೆ ಅಂತಾ ಇದೆ. ನನಗೆ ನ್ಯಾಯ ದೇವತೆ ಮೇಲೆ ನಂಬಿಕೆ ಇದೆ. ನಾಲ್ಕು ಕೇಸ್ ನಿಂದ ಹೊರ ಬರ್ತಿನಿ. ಒಂದು ವೇಳೆ ಮುಂದೆ ಯಾವ ರೀತಿ ತೆಗೆದುಕೊಂಡು ಹೊಗಬೇಕೋ ಆ ರೀತಿ ತೆಗೆದುಕೊಂಡು ಹೋಗ್ತೇವೆ. ನಾನು ಮನವಿ ಕೊಟ್ಟರೆ ನನ್ನ ಪ್ರಕರಣ ಬಿಡ್ತಾರೆ ಎಂದಿದ್ದಾರಲ್ಲ, ನಾನು ಲಾಯರ್ ಬಳಿ ಚರ್ಚಿಸುವೆ. ನನ್ನ ಮನವಿ ಕ್ಯಾಬಿನೆಟ್ ಅಲ್ಲಿ ಪಾಸ್ ಆಗಿ ಒಳ್ಳೆದಾಗೋದಾದ್ರೆ ನಾನು ಮಾಡುವೆ’ ಎಂದು ಅವರು ಹೇಳಿದರು.
ನನಗೆ ಯಾವ ಸರ್ಕಾರದ ಮೇಲೆ ಯಾವುದೇ ದ್ವೇಷ ಇಲ್ಲ. ನಾನು ದ್ವೇಷದ ರಾಜಕಾರಣ ಮಾಡೋನಲ್ಲ. ಜನಾರ್ದನ ರೆಡ್ಡಿ ಅವರು ಸಿದ್ದರಾಮಯ್ಯನವರು ಬೇಕು ಅಂತಾ ಮಾಡಿದ್ದಾರೆ ಎಂದಿದ್ದಾರೆ. ಇಡೀ ರಾಜ್ಯ ಗಮನಿಸ್ತಾ ಇದೆ, ಹೆಂಗಾಗಿದೆ ಅಂತಾ. ಜನಾರ್ದನ ರೆಡ್ಡಿ ಅವರಿಗೆ ನನ್ನ ಮೇಲೆ ಬಹಳ ಪ್ರೀತಿ ಇದೆ, ಅವರಿಗೆ ಧನ್ಯವಾದಗಳು. ಆದ್ರೇ ನಮ್ಮ ಸರ್ಕಾರದ ವಿಚಾರ ಬಂದಾಗ ಅವರನ್ನ ವಿರೋಧಿಸುವೆ. ನಮ್ಮ ಪ್ರಕರಣಗಳು ಇವತ್ತೋ ನಾಳೆನೋ ಇತ್ಯರ್ಥವಾಗತ್ತೆ’ ಎಂಬ ಜನಾರ್ದನ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ.