ನೆಲಮಂಗಲ:– ದನ ಮೇಯಿಸುತ್ತಿದ್ದ ವೃದ್ದ ಮಹಿಳೆ ಮೇಲೆ ಚಿರತೆ ದಾಳಿ ನೆಡೆಸಿ ಮಹಿಳೆಯ ಸೊಂಟದ ಭಾಗಕ್ಕೆ ಗಾಯಗೊಳಿಸಿದ್ದು ಅದೃಷ್ಟವಶಾತ್ ಪ್ರಾಣಾಪಾಯ ದಿಂದ ಪಾರಾದ ಘಟನೆ ನೆಲಮಂಗಲ ತಾಲೂಕು ದಾಬಸ್ ಪೇಟೆ ಸಮೀಪದ ಗೊಲ್ಲರಹಟ್ಟಿ ಗ್ರಾಮದ ಬಳಿ ನೆಡೆದಿದೆ.
ಇನ್ನೂ ಗೊಲ್ಲರಹಟ್ಟಿ ಕಾಲೋನಿ ನಿವಾಸಿ ಅಮ್ಮಯ್ಯ (60) ಚಿರತೆ ದಾಳಿಯಲ್ಲಿ ಗಾಯ ಗೊಂಡು ಸ್ಥಳೀಯ ದಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಿರತೆ ಯಿಂದ ತಮ್ಮ ದನಗಳನ್ನ ರಕ್ಷಣೆ ಮಾಡಲು ಮುಂದಾದ ವೇಳೆ ಈ ಘಟನೆ ನೆಡೆದಿದೆ.
ಈ ಸಂಬಂಧ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು,ನೆಲಮಂಗಲ ಅರಣ್ಯ ಇಲಾಖೆಯವರು ಚಿರತೆಯನ್ನ ಸೆರೆ ಹಿಡಿದು ಅರಣ್ಯಕ್ಕೆ ಬಿಡುವಂತೆ ಮನವಿ ಮಾಡಿದ್ದಾರೆ..