ಗಿಡಮೂಲಿಕೆ ಆಗಿರುವಂತಹ ಅರಶಿನವು ತುಂಬಾ ಪರಿಣಾಮಕಾರಿ. ಅರಿಶಿನದ ನೀರಿನಿಂದ ದೇಹದ ತೂಕ ಕಡಿಮೆ ಮಾಡಬಹುದು. ಇದನ್ನು ಭಾರತ ಹಾಗೂ ಆಗ್ನೇಯ ಏಶ್ಯಾದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅರಿಶಿನದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ.
ಹಿಂದಿನಿಂದಲೂ ಭಾರತೀಯರು ತಮ್ಮ ಔಷಧಿಯಲ್ಲಿ ಬಳಸಿಕೊಂಡು ಬರಲಾಗುತ್ತಿರುವಂತಹ ಅರಿಶಿನವು ತುಂಬಾ ಪರಿಣಾಮಕಾರಿ ಆಗಿದೆ. ಬಂಗಾರದ ಗಿಡಮೂಲಿಕೆ ಎಂದು ಕರೆಯಲ್ಪಡುವ ಅರಿಶಿನದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳೂ ಇವೆ ಮತ್ತು ಇದು ಆಹಾರಕ್ಕೆ ಹಳದಿ ಬಣ್ಣ ನೀಡುವುದು.
ಅರಿಶಿನವನ್ನು ತೂಕ ಇಳಿಸಲು ಬಳಸುವುದು ಹೇಗೆ?
ಅರಿಶಿನದ ಮೂಲ ಭಾರತವಾಗಿದ್ದು, ಹಿಂದಿನಿಂದಲೂ ಆಯುರ್ವೇದದಲ್ಲಿ ಇದು ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಆದರೆ ಇಂದಿನ ದಿನಗಳಲ್ಲಿ ಇದು ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಲಿದೆ. ಇದನ್ನು ಅಲ್ಲಿ ಚಹಾದ ರೂಪದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅರಿಶಿನದಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗುಣಗಳು ಹೊಟ್ಟೆಯ ಬೊಜ್ಜು ಕರಗಿಸುವುದು. ಅರಿಶಿನವನ್ನು ದಿನನಿತ್ಯದ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಹೊಟ್ಟೆಯ ಉಬ್ಬರ ಮತ್ತು ಗ್ಯಾಸ್ ಕಡಿಮೆ ಆಗುವುದು.
ಅರಿಶಿನದ ಆರೋಗ್ಯ ಲಾಭಗಳು
ಅರಿಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಶಮನಕಾರಿ ಗುಣ ಹೊಂದಿದೆ ಮತ್ತು ಇದು ಪ್ರತಿರೋಧಕ ವ್ಯವಸ್ಥೆಗೆ ಶಕ್ತಿ ನೀಡುವುದು. ಒಂದು ಲೋಟ ಅರಿಶಿನ ನೀರನ್ನು ಕುಡಿದರೆ ಅದರಿಂದ ದಿನವಿಡಿ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯು ಚೆನ್ನಾಗಿ ಇರುವುದು. ನೀವು ಬೆಳಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಬೇಕು.
ಇದು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ಚಯಾಪಚಯ ಕ್ರಿಯೆಗೆ ಶಕ್ತಿ ನೀಡುವುದು. ಸರಿಯಾದ ಜೀರ್ಣಕ್ರಿಯೆಗೆ ಅಗತ್ಯವಾದ ಪಿತ್ತರಸ ಮತ್ತು ಇತರ ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸಲು ಪಿತ್ತಕೋಶದ ಮೇಲೆ ಪ್ರಭಾವ ಬೀರುವ ಮೂಲಕ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ತೂಕ ಇಳಿಸಲು ಅರಿಶಿನದ ನೀರು ತಯಾರಿಸುವುದು ಹೇಗೆ?
ಸಾವಯವ ಅರಿಶಿನ ಹುಡಿ ಖರೀದಿಸಿ ಅಥವಾ ಮನೆಯಲ್ಲೇ ಶುಂಠಿ ಒಣಗಿಸಿ ಹುಡಿ ಮಾಡಿ. ಸಾವಯವವಾದ ಅರಿಶಿನ ಬೇರನ್ನು ನೀವು ಪಡೆಯುವುದು ಮುಖ್ಯ.
ಬೇಕಾಗುವ ಸಾಮಗ್ರಿಗಳು
½ಚಮಚ ಅರಿಶಿನ ಮತ್ತು ಒಂದು ಲೋಟ ನೀರು
ತಯಾರಿಸುವ ವಿಧಾನ
*ಒಂದು ಲೋಟ ನೀರನ್ನು ಬಿಸಿ ಮಾಡಿ
*ಅದಕ್ಕೆ ಅರಿಶಿನ ಹುಡಿ ಬೆರೆಸಿ, ಚೆನ್ನಾಗಿ ಕುದಿಯಲು ಬಿಡಿ
*ಈಗ ಅದನ್ನು ಸೋಸಿಕೊಳ್ಳಿ
*ರುಚಿಗೆ ಬೇಕಾದಷ್ಟು ಜೇನುತುಪ್ಪ ಬೆರೆಸಿ
*ಅತ್ಯಧಿಕ ಲಾಭಕ್ಕಾಗಿ ದಿನಕ್ಕೆ ಒಂದು ಸಲ ನೀವು ಇದನ್ನು ಕುಡಿಯಿರಿ.
*ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರನ್ನು ಕುಡಿದರೆ ಅದರಿಂದ ಹೆಚ್ಚಿನ ಲಾಭ ಸಿಗುವುದು. *ಚಯಾಪಚಯ ಕ್ರಿಯೆ ಹೆಚ್ಚಿಸಲು ಕೂಡ ನೀವು ಅರಿಶಿನ ಬೆರೆಸಿದ ನೀರನ್ನು ಕುಡಿಯಬಹುದು.