ಸ್ಯಾಂಡಲ್ವುಡ್ ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳ ಒಕ್ಕೂಟ ಡಿ. 17 ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಅಭಿಮಾನಿಗಳ ಪಾಲಿನ ‘ಹೃದಯವಂತ’ ಡಾ.ವಿಷ್ಣುವರ್ಧನ್ ಬಾರದ ಲೋಕಕ್ಕೆ ಪಯಣ ಬೆಳೆಸಿ ಡಿಸೆಂಬರ್ 30ಕ್ಕೆ 14 ವರ್ಷಗಳಾಗಲಿದೆ. ಇಷ್ಟು ವರ್ಷಗಳು ಕಳೆದರು ವಿಷ್ಣು ಪುಣ್ಯಭೂಮಿಯನ್ನು ನಿರ್ಲಕ್ಷಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ ಈ ಹಿನ್ನೆಲೆ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಗಾಗಿ ಇದೆ ಡಿಸೆಂಬರ್ 17 ರಂದು ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಟನೆಗಳ ಒಕ್ಕೂಟದಿಂದ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಲು ತೀರ್ಮಾನಿಸಿದೆ.
ಈ ಹೋರಾಟಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಸೇರಿಸಬೇಕಾಗಿರುವುದರಿಂದ ಡಾ.ವಿಷ್ಣು ಸೇನಾ ಸಮಿತಿ ಕೇಂದ್ರ ಸಮಿತಿ ವತಿಯಿಂದ ಎಲ್ಲಾ ಜಿಲ್ಲಾವಾರು, ತಾಲೂಕುವಾರು, ಶಾಖೆ ಘಟಕಗಳ ಅಧ್ಯಕ್ಷರುಗಳು ಇದೆ ಡಿ.03ರಂದು ಭಾನುವಾರ ಆಯಾ ಭಾಗದಲ್ಲಿರುವ ಅಭಿಮಾನಿಗಳನ್ನು ಒಳಗೊಂಡಂತೆ ಒಂದು ಸಭೆ ಮಾಡುವ ಮೂಲಕ ಪುಣ್ಯಭೂಮಿಗಾಗಿ ಮಾಡುತ್ತಿರುವ ಹೋರಾಟದ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿ 17 ರ ಪ್ರತಿಭಟನೆಗೆ ಸಾವಿರಾರು ಜನರು ಪಾಲ್ಗೊಳ್ಳಬೇಕೆಂದು ತಿಳಿಸಲಾಗುತ್ತಿದೆ ತಿಳಿಸಿದೆ.