ಕಬ್ಬು ಬೆಳೆಯುವ ಎಲ್ಲ ಜಿಲ್ಲೆಗಳ ಸರಾಸರಿ ಆಧಾರದಲ್ಲಿ ನೋಡಿದಾಗ ಒಂದು ಎಕರೆಗೆ 28ರಿಂದ 30 ಟನ್ ಇಳುವರಿ ತೆಗೆಯಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ರೈತರು ಒಂದು ಎಕರೆಗೆ ಸರಾಸರಿ 75 ಟನ್ವರೆಗೆ ಕಬ್ಬು ಬೆಳೆದರೆ, ಮಂಡ್ಯ ಜಿಲ್ಲೆಯ ರೈತರು ಎಕರೆಗೆ ಸರಾಸರಿ 40 ಟನ್ ಇಳುವರಿ ತೆಗೆಯುತ್ತಾರೆ. ಆದರೆ ಬೆಳಗಾವಿ ಜಿಲ್ಲೆಯ ರೈತರೊಬ್ಬರು ವಾರ್ಷಿಕ ಸರಾಸರಿ 90 ಟನ್ ಕಬ್ಬು ಬೆಳೆಯುವ ಮುಲಕ ಗಮನಸೆಳೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆ, ಅಥಣಿ ತಾಲೂಕಿನ ಶೇಡಬಾಳ ಗ್ರಾಮದ ಕಬ್ಬು ಬೆಳೆಗಾರ ಸುರಗೌಡ ರಾಯಗೌಡ ಪಾಟೀಲ ಅವರು 2019ರಲ್ಲಿ ಒಂದು ಎಕರೆಗೆ ಬರೋಬ್ಬರಿ 148 ಟನ್ ಕಬ್ಬು ಬೆಳೆದು ದಾಖಲೆ ನಿರ್ಮಿಸಿದ್ದರು.
ರಾಜ್ಯ ಒಂದೇ ಆದರೂ ಕಬ್ಬು ಇಳುವರಿಯಲ್ಲಿ ಇಷ್ಟೊಂದು ವ್ಯತ್ಯಾಸ ಏಕೆ. ವ್ಯತ್ಯಾಸವಾದರೂ 10-20 ಟನ್ ಆಗಬಹುದು. ಆದರೆ 70-100 ಟನ್ ವರೆಗೆ ವ್ಯತ್ಯಾಸವಾಗಲು ಕಾರಣವೇನು ಎಂಬುದು ಹಲವು ರೈತರ ಪ್ರಶ್ನೆ. ಇದಕ್ಕೆ ಉತ್ತರ. ಆಯಾ ಪ್ರದೇಶದ ಮಣ್ಣಿನ ಗುಣ, ವಾತಾವರಣ ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ಕಬ್ಬು ಬೆಳೆಯುವ ರೈತರು ಅನುಸರಿಸುವ ವಿಧಾನ. ಬಳಸುವ ಪೋಷಕಾಂಶಗಳು ಹಾಗೂ ರಾಸಾಯನಿಕ ಗೊಬ್ಬರಗಳ ಬಳಕೆ ಪ್ರಮಾಣ. ದಾವಣಗೆರೆ, ಬಿಜಾಪುರ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ದಶಕಗಳ ಹಿಂದೆ ಸಕ್ಕರೆ ಕಾರ್ಖಾನೆಗಳು ಆರಂಭವಾದಾಗ ಅಲ್ಲಿನ ರೈತರು ಪ್ರತಿ ಎಕರೆಗೆ ಸರಾಸರಿ 50 ರಿಂದ 70 ಟನ್ ಕಬ್ಬು ಬೆಳೆಯುತ್ತಿದ್ದರು