ಬೆಂಗಳೂರು: ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಬರುವಂತೆ ಮಾಡಿದ ರಕ್ಷಣಾ ಕಾರ್ಯಾಚರಣೆ ತಂಡವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ನವೆಂಬರ್ 12 ರಿಂದ ಉತ್ತರಾಖಂಡದಲ್ಲಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಇಂದು ಯಶಸ್ವಿಯಾಗಿ ರಕ್ಷಿಸಲಾಗಿದ್ದು ಹೃದಯಾ ತುಂಬಿಬಂದಿದೆ. ಅವರ ಅಚಲ ಬದ್ಧತೆ ಮತ್ತು ಸಮರ್ಪಣೆಗಾಗಿ ರಕ್ಷಣಾ ತಂಡದ ವೀರೋಚಿತ ಪ್ರಯತ್ನಗಳಿಗೆ ನನ್ನ ಪ್ರಾಮಾಣಿಕ ಅಭಿನಂದನೆಗಳು. ಎನ್ನುವ ಮೂಲಕ ತಮ್ಮ ಪ್ರಶಂಸೆಗಳು ತಿಳಿಸಿದ್ದಾರೆ.
ಏನಿದು ಘಟನೆ:
ನವೆಂಬರ್ 12 ರಂದು ಸಿಲ್ಕ್ಯಾರ ಸುರಂಗದಲ್ಲಿ ಕಾರ್ಮಿಕರು ಕಾರ್ಯನಿರತರಾಗಿದ್ದ ವೇಳೆ ಸುರಂಗದಲ್ಲಿ ಕುಸಿತಗೊಂಡಿತ್ತು ಈ ವೇಳೆ 41 ಕಾರ್ಮೀಕರು ಸುರಂಗದಲ್ಲಿ ಸಿಲುಕಿಕೊಂಡಿದ್ದರು. ಇವರನ್ನು ರಕ್ಷಣಾ ಕಾರ್ಯಾಚರಣೆ ಪಡೆ 17 ದಿನಗಳ ಕಾಲ ನಿರಂತರ ಯಶಸ್ವಿ ಕಾರ್ಯಾಚರಣೆ ಮಾಡುವ ಮೂಲಕ ನ.28 ರಂದು ಸುರಕ್ಷಿತವಾಗಿ ಹೊರತೆಗೆಯಲಾಯಿತು.