ವಿಜಯಪುರ: ಆಕಸ್ಮಿಕ ಅಗ್ನಿ ಅವಘಡದಿಂದ 20 ಎಕರೆಗೂ ಅಧಿಕ ಕಬ್ಬಿಗೆ ಬೆಂಕಿ ತಗುಲಿ ಹಾನಿಯಾಗಿರುವ ಘಟನೆ ವಿಜಯಪುರ ಜಿಲ್ಲೆ, ಚಡಚಣ ತಾ, ಧೂಳಖೇಡ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಸನ್ನ ನೀಲೂರೆ, ವೀರೇಶ ಕೋರೆ, ದಯಾನಂದ ಕೋರೆ. ಜಗನ್ನಾಥ ರೇವತಗಾಂವ ಎನ್ನುವವರಿಗೆ ಸೇರಿದ ಜಮೀನು ಆಗಿದ್ದು, ಕಟಾವಿಗೆ ಸಿದ್ಧವಾಗಿದ್ದ ಕಬ್ಬು, ಸುಮಾರು 20 ಲಕ್ಷಕ್ಕೂ ಅಧಿಕ ಹಾನಿಯಾಗಿದೆ.
ಇಂಡಿಯಿಂದ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಯಿಂದ ಉಳಿದ ಕಬ್ಬು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದ್ದು, ಕೂಡಲೇ ಹತ್ತಿರದಲ್ಲಿದ್ದ ಕಬ್ಬು ಕಟಾವಿನ ಗ್ಯಾಂಗ್ ಕರೆಸಿ ಕಟಾವು ಮಾಡಿ ಹತ್ತಿರದ ಸಕ್ಕರೆ ಕಾರ್ಖಾನೆಗೆ ಸಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.