ಕಲಬುರಗಿ: ಕಾಂತರಾಜು ಜಾತಿ ಸಮೀಕ್ಷೆಯ ವರದಿಯನ್ನ ಬಹಿರಂಗಪಡಿಸಲು ಆಗ್ರಹಿಸಿ ಬೆಂಗಳೂರಲ್ಲಿ ಡಿಸೆಂಬರ್ 1 ರಂದು ಒಂದು ದಿನದ ಹೋರಾಟ ಹಮ್ಮಿಕೊಂಡಿದ್ದೇವೆ ಅತ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನಿರ್ಧರಿಸಿದೆ..
ಕಲಬುರಗಿಯಲ್ಲಿಂದು ಮಾತನಾಡಿದ ಮಹಾಸಭಾ ಮುಖಂಡರು ವಿಶ್ವಕರ್ಮ ಸಮುದಾಯದ ಜನರಿಗೆ ಅವರವರ ಜನಸಂಖ್ಯೆಗೆ ತಕ್ಕಂತೆ ಸೂಕ್ತ ಸ್ಥಾನಮಾನಗಳನ್ನ ನೀಡಬೇಕು ಅಂತ ಆಗ್ರಹಿಸಿದರು.ಹೀಗಾಗಿ ಸಮಾಜದ ಮುಖಂಡ ಕೆಪಿ ನಂಜುಂಡಿ ನೇತ್ರತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದು ನಮ್ಮ ಸಮಾಜದ ಶಕ್ತಿ ಏನೂಂತ ತೋರಿಸ್ತೇವೆ ಅಂತ ಹೇಳಿದ್ರು..