ಚಾಮರಾಜನಗರ :-ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ವಾಸಿ ಸ್ವಾತಿ(26) ಬಿನ್ ಸುರೇಶ್ ವರದಕ್ಷಿಣೆ ಕಿರಕುಳಕ್ಕೆ ಮೃತ ಪಟ್ಟಿರುವ ಗೃಹಿಣಿಯಾಗಿದ್ದಾಳೆ.
ಸ್ವಾತಿಗೆ ಪತಿ ವಿನಯ್ ಹಾಗೂ ಅತ್ತೆ ನಂದಿನಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಹಾಗೂ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಸೋಮವಾರ ಮದ್ಯಾಹ್ನ ದರ್ಶನ್ ಲೇಔಟಿನಲ್ಲಿರುವ ವಿನಯ್ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸ್ವಾತಿ ಮೃತ ದೇಹ ಪತ್ತೆಯಾಗಿದೆ.
ಬೇಗೂರು ಗ್ರಾಮದ ಸೂರಿ ಮಂಜುಳ ದಂಪತಿಯ ಮುದ್ದಿನ ಮಗಳಾಗಿದ್ದ ಸ್ವಾತಿ ಶಿಕ್ಷಕಿಯಾಗಿದ್ದಳು ಈಗ್ಗೆ 8 ತಿಂಗಳ ಹಿಂದೆ ಹಂಗಳ ಮೂಲದ ವಿನಯ್ ಗೆ ಮದುವೆ ಮಾಡಿಕೊಡಲಾಗಿತ್ತು
ಮದುವೆ ನಂತರ ಸ್ವಾತಿಗೆ ಪ್ರತಿನಿತ್ಯ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡ್ತಾ ಇದ್ದರು ಎಂದು ಮೃತ ಪೋಷಕರು ಆರೋಪಿಸಿ ಗುಂಡ್ಲುಪೇಟೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಕೇಸು ದಾಖಲಾಗಿದೆ.
ಮೃತ ದೇಹದ ಸಮೀಪ ಡೆತ್ ನೋಟ್ ಸಿಕ್ಕಿದ್ದು ಪೋಲೀಸರ ತನಿಖೆಯಿಂದ ಸಾವಿಗೆ ನಿಖರ ಕಾರಣ ತಿಳಿಯಲಿದೆ.