600ಕ್ಕೂ ಹೆಚ್ಚು ಚಿತ್ರದಲ್ಲಿ ವಿವಿಧ ಪಾತ್ರದಲ್ಲಿ ನಟಿಸಿದ ಹಿರಿಯ ಮೇರು ನಟಿ ಅವರು, ಈ ಇಳಿ ವಯಸ್ಸಿನಲ್ಲಿ ಸಹ ಗ್ರಾಮೀಣ ಪ್ರದೇಶದ ಬಡವರು ಹಾಗೂ ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರವಾದ ಪ್ರೀತಿ, ತಾಯಿಯ ಆಸೆಗೆ ತಕ್ಕ ಮಗ ಶ್ರವಣ ಕುಮಾರನ ಹಾಗೆ ಪ್ರೀತಿಯಿಂದ ನೋಡಿಕೊಳ್ಳುತಿದ್ದಾರೆ. ಆರು ಆ ಮಹಾ ತಾಯಿ ಅಂತೀರ ಹಾಗಾದರೆ ಈ ಸ್ಟೋರಿ ನೋಡಿ..
ಕನ್ನಡ ಚಿತ್ರರಂಗದ ಹಿರಿಯ ಮೇರು ನಟಿ ಡಾ.ಎಂ.ಲೀಲಾವತಿ ಬೆಳ್ಳಿ ತೆರೆಯಿಂದ ಹಿಡಿದು ಕಲ್ಲರ್ ಪರದೆಯಲ್ಲಿ ವಿವಿಧ ಪಾತ್ರವನ್ನ ಅಭಿನಯಿಸಿ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿ ಸಿನಿಮಾ ಜೊತೆಗೆ ಕೃಷಿಯನ್ನ ಮಾಡಿ ಜೀವನ ನಡೆಸಿದ ಲೀಲಾವತಿಯವರು, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ 25 ವರ್ಷದಿಂದ ವಾಸವಾಗಿದ್ದಾರೆ. ಇನ್ನೂ ತಮ್ಮ ತೋಟದಲ್ಲಿ ವಿವಿಧ ಬಗೆಯ ಮಿಶ್ರ ತಳಿ ಮೂಲಕ ವ್ಯವಸಾಯವನ್ನ ತಮ್ಮ ಮಗ ವಿನೋದ್ ರಾಜ್ ಮೂಲಕ ಬೆಳೆಸಿದ್ದಾರೆ. ಇನ್ನೂ ಇತ್ತೀಚೆಗೆ ಅನಾರೋಗ್ಯದಿಂದ ಆಸಿಗೆ ಹಿಡಿದಿದ್ದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ತಾಯಿಯ ಆರೋಗ್ಯ ವೃದ್ಧಿಗಾಗಿ ಮಗ ವಿನೋದ್ ರಾಜ್ ಮನೆಯಲ್ಲಿ ಮೃತ್ಯುಂಜಯ ಹೋಮ, ಗಣ ಹೋಮ, ಹೀಗೆ ಹೋಮ ಹವನಗಳನ್ನ ಮಾಡಿ ತಾಯಿಯ ಆರೋಗ್ಯಕ್ಕಾಗಿ ದೇವರ ಮೊರೆಹೋಗಿದ್ದಾರೆ.
ಇನ್ನೂ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿಯವರನ್ನ
ಭೇಟಿ ಮಾಡಲು ಹಾಗೂ ಆರೋಗ್ಯ ವಿಚಾರಿಸಲು ಚಿತ್ರರಂಗದ ಹಲವಾರು ನಟ ನಟಿಯರು ತೋಟಕ್ಕೆ ಬಂದು ಹೋಗುತಿದ್ದಾರೆ. ಇಂದು ನಟ ದರ್ಶನ್ ಕೂಡ ಆಗಮಿಸಿ ವಿನೋದ್ ರಾಜ್ ಜೊತೆಗೆ ಲೀಲಾವತಿಯವರ ಆರೋಗ್ಯ ವಿಚಾರಿಸಿ ಕೆಲಕಾಲ ಮಾತುಕತೆ ನಡೆಸಿ ತೆರಳಿದ್ದಾರೆ.
ಒಟ್ಟಾರೆ ಸಾಕಷ್ಟು ಸಮಾಜದ ಸೇವೆಯ ಜೊತೆಗೆ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಹಿರಿಯ ಮೇರು ನಟಿ ಡಾ.ಎಂ.ಲೀಲಾವತಿಯವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪುತ್ರ ವಿನೋದ್ ರಾಜ್ ದೇವರ ಮೊರೆಹೋಗಿದ್ದಾರೆ.