ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತೊರೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ವಾಪಸ್ಸಾಗಿರುವುದು ಅಧಿಕೃತವಾಗಿದೆ.
ತವರಿಗೆ ಹಾರ್ದಿಕ್ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಖಚಿತಪಡಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್, ಅನೇಕ ಅದ್ಭುತ ನೆನಪುಗಳನ್ನು ಮರಳಿ ತಂದಿದೆ.
ಮುಂಬೈ, ವಾಂಖೆಡೆ, ಪಲ್ಟನ್ಗೆ ಮರಳಿ ಬಂದಿರುವುದು ನನಗೆ ಒಳ್ಳೆಯದೆನಿಸುತ್ತಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಐಪಿಎಲ್ ಹರಾಜಿನಲ್ಲಿ 10 ಲಕ್ಷ ರೂಪಾಯಿಗೆ ಬಿಕರಿಯಾದ ಹಳೆಯ ವಿಡಿಯೋವನ್ನು ಹಾರ್ದಿಕ್ ಹಂಚಿಕೊಂಡಿದ್ದಾರೆ.