ಬೆಂಗಳೂರು: ಕ್ಯಾನ್ಸರ್ ಹಬ್ ಆಗುತ್ತಿದ್ಯಾ ಸಿಲಿಕಾನ್ ಸಿಟಿ…! ಹೌದು ಕಿದ್ವಾಯಿ ನೀಡಿರುವ ವರದಿ ಭಯ ಹುಟ್ಟಿಸುತ್ತದೆ. ಈ ಕುರಿತ ಒಂದು ವರದಿ ಇಲ್ಲಿದೆ.
ಸಿಲಿಕಾನ್ ಸಿಟಿ ಮಂದಿಯನ್ನು ಬೆಚ್ಚಿ ಬೀಳಿಸಿದೆ ಕಿದ್ವಾಯಿ ಆಸ್ಪತ್ರೆ ವರದಿ. ಹೌದು ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿಯೇ 47 ಸಾವಿರಕ್ಕೂ ಹೆಚ್ಚು ಕೇಸ್ ಗಳು ಸಕ್ರಿಯಾವಾಗಿದೆ . ರಾಜ್ಯದಲ್ಲಿ 2.30 ಲಕ್ಷ ಕ್ಯಾನ್ಸರ್ ಪ್ರಕರಣಗಳು ಸಕ್ರಿಯವಾಗಿವೆ. ಪ್ರತಿ ವರ್ಷ ರಾಜ್ಯದಲ್ಲಿ ಅಂದಾಜು 80 ಸಾವಿರಕ್ಕೊ ಹೆಚ್ಚು ಹೊಸ ಕೇಸ್ಗಳು ದಾಖಲು ಆಗ್ತಿವೆ.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ತಂಬಾಕು ಸೇವನೆಯಿಂದಾಗಿ ಬೆಂಗಳೂರಿನಲ್ಲಿ ಹೆಚ್ಚು ಕೇಸ್ಗಳು ದಾಖಾಲಾಗುತ್ತಿದೆ.ಬೆಂಗಳೂರಿನಲ್ಲಿ ಕ್ಯಾನ್ಸರ್ ನಿಂದಬಳಲುತ್ತಿರುವವರಲ್ಲಿ ತಂಬಾಕು ಸೇವನೆ ಮಾಡುತ್ತಿರೋರು ಜಾಸ್ತಿ.ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಶೇಕಡಾ 2% ಕ್ಯಾನ್ಸರ್ ಪ್ರಕರಣಗಳ ಹೆಚ್ಚಳವಾಗಿವೆ ಎಂದು ಕಿದ್ವಾಯಿ ಆಸ್ಪತ್ರೆ ವರದಿ ಮಾಡಿದೆ.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವ ಮಾತನ್ನು ಈಗ ಪಾಲಿಸಬೇಕಿದ್ದು, ಇನ್ನಾದರೂ ಜಾಗೃತೆಯಿಂದ ಇರಬೇಕಿರುವುದು ಅವಶ್ಯಕವಾಗಿದೆ.