ಮುಂಬೈ: ಡಿಸೆಂಬರ್ನಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿಗೂ (IPL 2024 Auction) ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 11 ಆಟಗಾರರನ್ನ ಬಿಡುಗಡೆ ಮಾಡಿದ್ದು, 16 ಆಟಗಾರರನ್ನ ಉಳಿಸಿಕೊಂಡಿದೆ.
ವಿಶೇಷವೆಂದರೆ ಕಳೆದ ಡಿಸೆಂಬರ್ 30 ರಂದು ಕಾರು ಅಪಘಾತದಲ್ಲಿ ಗಾಯಗೊಂಡು 2022ರ ಐಪಿಎಲ್ನಿಂದ (IPL 2022) ಹೊರಗುಳಿದಿದ್ದ ರಿಷಬ್ ಪಂತ್ 2024ರ ಐಪಿಎಲ್ನಲ್ಲಿ (IPL 2024) ಮತ್ತೆ ಪ್ಯಾಡ್ ಕಟ್ಟಲಿದ್ದಾರೆ. ರಿಷಬ್ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಕ್ಯಾಂಪನ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, 17ನೇ ಆವೃತ್ತಿಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.
ಇನ್ನೂ ಕನ್ನಡಿಗ ಮನಿಷ್ ಪಾಂಡೆ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ವಿವಾದಕ್ಕೆ ಗುರಿಯಾಗಿದ್ದ ಮಿಚೆಲ್ ಮಾರ್ಷ್ ಅವರನ್ನು ತನ್ನಲ್ಲೇ ಉಳಿಸಿಕೊಂಡಿದೆ.
2023ರ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 14ರಲ್ಲಿ ಕೇವಲ 5 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತ್ತು. -0.808 ರನ್ರೇಟ್ ಹಾಗೂ 10 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಉಳಿದುಕೊಂಡಿತ್ತು.