ಮಂಡ್ಯ: ಭ್ರೂಣ ಹತ್ಯೆ ಇದು ಸಮಾಜಘಾತುಕ ಕೆಲಸ. ಇದನ್ನ ಖಂಡಿಸುತ್ತೇನೆ. ಈ ರೀತಿ ಯಾರೂ ಮಾಡಬಾರದು, ಪ್ರೋತ್ಸಾಹ ಕೊಡುವುದೂ ತಪ್ಪು. ರಾಜ್ಯದಲ್ಲಿ ಎಲ್ಲೇ ಇಂಥ ಘಟನೆ ನಡೆದ್ರೆ ಕಠಿಣಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಭ್ರೂಣ ಹತ್ಯೆ ಪತ್ತೆ ಪ್ರಕರಣವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಈ ಬಗ್ಗೆ ಗಮನಹರಿಸುತ್ತಾರೆ ಎಂದು ಹೇಳಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ..! SBIನಲ್ಲಿ ಖಾಲಿಯಿದೆ 8283 ಹುದ್ದೆಗಳು
ಸೂಕ್ತ ಕ್ರಮವಾಗುತ್ತದೆ, ಎಲ್ಲದಕ್ಕೂ ಕಡಿವಾಣ ಹಾಕಲಾಗುವುದು. ವಿಪಕ್ಷಗಳು ಈ ಹಿಂದೆ ಆಡಳಿತ ಮಾಡಿದಾಗ ಇದಕ್ಕೆ ಕಡಿವಾಣ ಹಾಕಿಲ್ಲ. ನಾವು ಮಾಡುವಾಗ ಮಾಹಿತಿ ನೀಡಿ ಪ್ರೋತ್ಸಾಹ ಕೊಡುವ ಕೆಲಸಮಾಡಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆಗೆ ಮುಂದಾಗುತ್ತಾರೆ ಎಂದಿದ್ದಾರೆ.