ಬೆಂಗಳೂರು: ಡಿಕೆಶಿವಕುಮಾರ್ (DK Shivakumar) ವಿರುದ್ಧ ಬಿಜೆಪಿ ಸರ್ಕಾರ ರಾಜಕೀಯವಾಗಿ ತೆಗೆದುಕೊಂಡಿದ್ದ ನಿರ್ಣಯಕ್ಕೆ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿಯೇ ಉತ್ತರ ಕೊಟ್ಟಿದೆ ಅಂತ ಸಂಸದ ಡಿಕೆ ಸುರೇಶ್ (DK Suresh) ಸಹೋದರನ ಸಿಬಿಐ ಕೇಸ್ ವಾಪಸ್ ತೆಗೆದುಕೊಂಡ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ಇಡೀ ದೇಶದ ಸಂವಿಧಾನವನ್ನ ಬಿಗಿ ಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಕಳೆದ 9 ವರ್ಷದಿಂದ ಸಂವಿಧಾನ ವಿರೋಧಿ ಕೆಲಸ ಮಾಡ್ತಿದ್ದಾರೆ. ಸಾಂವಿಧಾನ ಹುದ್ದೆಯನ್ನ ದುರ್ಬಳಕೆ ಮಾಡ್ತಿದ್ದಾರೆ. ಕೇಸ್ ವಾಪಸ್ ಪಡೆದಿರೋದು ರಾಜ್ಯ ಸರ್ಕಾರದ (Government Of Karnataka) ನಿರ್ಣಯ. ಇಡೀ ಕ್ಯಾಬಿನೆಟ್ ತೀರ್ಮಾನ. ಹಿಂದೆ ಡಿಕೆ ಶಿವಕುಮಾರ್ ಅವರನ್ನ ಸಿಲುಕಿಸಬೇಕು ಅಂತ ಅವರ ಹೈಕಮಾಂಡ್ ಮಾತು ಕೇಳಿ ಕೇಸ್ ಸಿಬಿಐಗೆ ಕೊಟ್ರು. ಡಿಕೆಶಿವಕುಮಾರ್ ಅವರನ್ನ ರಾಜಕೀಯ ದಾಳ ಮಾಡಿಕೊಳ್ಳಲು ಬಿಜೆಪಿ ಅವರು ಆತುರವಾಗಿ ತೀರ್ಮಾನ ಮಾಡಿದ್ದರು. ಬಿಜೆಪಿ ಮಾಡಿದ ಆತುರದ ತೀರ್ಮಾನವನ್ನು ಕ್ಯಾಬಿನೆಟ್ ಹಿಂಪಡೆದಿದೆ ಅಂತ ಸಮರ್ಥನೆ ಮಾಡಿಕೊಂಡರು.
ಮೊದಲೇ ಇಡಿ, ಐಟಿ (ED – IT) ಈ ಕೇಸ್ ನಡೆಸುತ್ತಿತ್ತು. ಹೀಗಿದ್ದರೂ ಈ ಕೇಸ್ ಅನ್ನ ಸಿಬಿಐಗೆ ಕೊಟ್ರು. ಸಿಬಿಐಯನ್ನ ಬಳಸಿಕೊಂಡು ಡಿಕೆ ಶಿವಕುಮಾರ್ ಅವರಿಗೆ ತೊಂದರೆ ಕೊಡೋಕೆ, ರಾಜಕೀಯ ಕಾರಣಕ್ಕೆ ಮಾಡಿದ ಪ್ರಕರಣ ಇದು. ಯಾವುದೇ ಕೇಸ್ ಸಿಬಿಐಗೆ ಕೊಡಬೇಕಾದರೇ ಸರ್ಕಾರ, ಕಾನುನೂ ಇಲಾಖೆ ಒಪ್ಪಿಗೆ ಬೇಕು. ಆದರೆ ಕಾನೂನು ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಲೋಕಾಯುಕ್ತದ ಮೂಲಕವೇ ಮಾಡಬಹುದಿತ್ತು. ಆದರೆ ಡಿಕೆಶಿವಕುಮಾರ್ ಅವರಿಗೆ ತೊಂದರೆ ಕೊಡಬೇಕು ಅಂತ ಕಾನೂನು ಮೀರಿ ಸಿಬಿಐಗೆ ಕೇಸ್ ಕೊಟ್ಟರು. ರಾಜಕೀಯವಾಗಿ ಮಾಡಿದ ಪ್ರಕರಣಕ್ಕೆ ರಾಜಕೀಯವಾಗಿ ಕಾಂಗ್ರೆಸ್ ಸರ್ಕಾರ ಉತ್ತರ ಕೊಟ್ಟಿದೆ ಅಂತ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.