ನ್ಯೂಯಾರ್ಕ್: ಅಮೆರಿಕಾದ ಮಿಸೌರಿಯಲ್ಲಿ 63 ವರ್ಷ ವಯಸ್ಸಿನ ರೋಗಿಯ ದೊಡ್ಡ ಕರುಳಿನೊಳಗೆ (Intestines) ನೊಣ ಇರುವುದನ್ನು ಕಂಡು ವೈದ್ಯರೇ ದಂಗಾಗಿದ್ದಾರೆ. ಈ ನೊಣ (House Fly) ಹೊಟ್ಟೆಯೊಳಗೆ ಹೇಗೆ ಸೇರಿಕೊಂಡಿದೆ ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ. ಯಾಕೆಂದರೆ ರೋಗಿಗೆ ನೊಣವನ್ನು ನುಂಗಿರುವಂತಹ ಯಾವುದೇ ಸಂದರ್ಭ ನೆನಪಿಲ್ಲ. ಅಲ್ಲದೇ ಅವರು ಯಾವುದೇ ಅಸ್ವಸ್ಥತೆಯ ಲಕ್ಷಣ ಕಾಣಿಸಿಕೊಂಡಿಲ್ಲ ಎಂದು ಮಿಸೌರಿ ವಿಶ್ವವಿದ್ಯಾನಿಲಯದ ಗ್ಯಾಸ್ಟ್ರೋಎಂಟರಾಲಜಿಯ ಮುಖ್ಯಸ್ಥ ಮ್ಯಾಥ್ಯೂ ಬೆಚ್ಟೋಲ್ಡ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ರೋಗಿಯು ಆರೋಗ್ಯ ಪರೀಕ್ಷೆಯ ಎರಡು ದಿನಗಳ ಹಿಂದೆ ಪಿಜ್ಜಾ ಮತ್ತು ಲೆಟಿಸ್ ಅನ್ನು ಸೇವಿಸಿರುವುದಾಗಿ ತಿಳಿಸಿದ್ದಾರೆ. ಆದರೆ ತಾನು ಸೇವಿಸಿದ ಆಹಾರದಲ್ಲಿ ನೊಣ ಕಂಡ ನೆನಪಿಲ್ಲ. ಇದು ಕೊಲೊನೋಸ್ಕೋಪಿ ಸಮಯದಲ್ಲಿ ಅತ್ಯಂತ ಅಪರೂಪದ ಆವಿಷ್ಕಾರ ಎಂದು ವಿವರಿಸುತ್ತದೆ ಎಂದು ಅಮೆರಿಕನ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಸಂಶೋಧನೆಯಲ್ಲಿ ವರದಿಯಾಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ..! SBIನಲ್ಲಿ ಖಾಲಿಯಿದೆ 8283 ಹುದ್ದೆಗಳು
ರೋಗಿಯು ಆಕಸ್ಮಿಕವಾಗಿ ಅದನ್ನು ನುಂಗಿದ್ದಾನೆಯೋ ಅಥವಾ ಕೆಳಗಿನಿಂದ ನೊಣ ಪ್ರವೇಶಿಸಿದೆಯೋ ಎಂಬ ಪ್ರಶ್ನೆಯೂ ಎದ್ದಿದೆ. ಯಾಕೆಂದರೆ ನೊಣ ಕರುಳು ಸೇರಿಕೊಳ್ಳಲು ಈ ಎರಡು ಸಾಧ್ಯತೆಗಳಿವೆ. ವ್ಯಕ್ತಿಯು ನೊಣವನ್ನು ನುಂಗಿರುವ ಸಾಧ್ಯತೆ ಕಡಿಮೆ ಇದೆ. ಕೆಳಗಿನಿಂದ ಬಂದಿದ್ದರೆ ನೊಣವು ದೊಡ್ಡ ಕರುಳಿನಲ್ಲಿ ಕತ್ತಲೆಯಾದ ಮತ್ತು ಅಂಕುಡೊಂಕಾದ ಮಾರ್ಗವನ್ನು ನ್ಯಾವಿಗೇಟ್ ಮಾಡಬೇಕಾಗಿತ್ತು. ಆದರೆ ಇಲ್ಲಿ ಇದು ಕೂಡ ಅಸಂಭವವೆಂದು ತೋರುತ್ತದೆ ಎಂದು ಡಾ. ಬೆಚ್ಟೋಲ್ಡ್ ಹೇಳಿದರು. ಒಟ್ಟಿನಲ್ಲಿ ಜೀರ್ಣಾಂಗವ್ಯೂಹದ ಮೂಲಕ ಈ ನೊಣ ಹೇಗೆ ಜೀವಂತವಾಗಿ ಉಳಿದುಕೊಂಡಿತು ಎಂದು ಇಡೀ ವೈದ್ಯಲೋಕವೇ ತಲೆಕೆಡಿಸಿಕೊಂಡಿದೆ.