ಆಧಾರ್ ಕಾರ್ಡ್ನಲ್ಲಿ ಜನ್ಮದಿನಾಂಕವನ್ನು ತಿದ್ದಲು ಒಮ್ಮೆ ಮಾತ್ರವೇ ಅವಕಾಶ ಇರುತ್ತದೆ. ಎರಡನೇ ಬಾರಿ ತಿದ್ದಲು ಅವಕಾಶವೇ ಇಲ್ಲ ಎನ್ನುವಂತಿಲ್ಲ. ಅದಕ್ಕೂ ಅವಕಾಶ ಇದೆ. ಆದರೆ, ಕೆಲವೊಂದು ನಿಯಮಗಳು ಅನ್ವಯ ಆಗುತ್ತವೆ.
ಆಧಾರ್ನಲ್ಲಿ ನಿಮ್ಮ ಡೇಟ್ ಆಫ್ ಬರ್ತ್ ಅನ್ನು ಎರಡನೇ ಬಾರಿ ಅಪ್ಡೇಟ್ ಮಾಡಲೇಬೇಕೆಂದಿದ್ದರೆ ಅದಕ್ಕೆ ಎಕ್ಸೆಪ್ಷನ್ ಪ್ರೋಸಸ್ ಅಥವಾ ವಿಶೇಷ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ನಿಮ್ಮ ಹೊಸ ಜನ್ಮದಿನಾಂಕಕ್ಕೆ ಸಾಕ್ಷ್ಯವಾಗಿರುವ ದಾಖಲೆ ನಿಮ್ಮ ಜೊತೆ ಇರಬೇಕು.
ಜನ್ಮದಿನಾಂಕ ಸಾಕ್ಷ್ಯದ ದಾಖಲೆಗಳು
- ಭಾರತೀಯ ಪಾಸ್ಪೋರ್ಟ್
- ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳಿಂದ ನೀಡಿದ ಸರ್ವಿಸ್ ಫೋಟೋ ಐಡಿ
- ಸರ್ಕಾರದಿಂದ ಒದಗಿಸಿದ ಪಿಂಚಣಿ, ಫ್ರೀಡಂ ಫೈಟರ್ ಫೋಟೋ ಐಡಿ ಕಾರ್ಡ್
- ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಅಥವಾ ಯಾವುದೇ ವಿವಿ ಅಂಕಪಟ್ಟಿ, ತೇರ್ಗಡೆ ಪ್ರಮಾಣಪತ್ರ
- ತೃತೀಯ ಲಿಂಗಿ ಐಡಿ ಕಾರ್ಡ್
- ಜನನ ಪ್ರಮಾಣಪತ್ರ
- ವಿಶೇಷ ಪ್ರಕ್ರಿಯೆಗೆ ಬಿಬಿಎಂಪಿ ಅಥವಾ ನಿಮ್ಮ ಜಿಲ್ಲೆಯ ಪ್ರಾಧಿಕಾರ ನೀಡಿದ ಜನನ ಪ್ರಮಾಣಪತ್ರ ಹಾಗೂ ಸೆಲ್ಫ್ ಡಿಕ್ಲರೇಶನ್ ಅರ್ಜಿ ಇರಬೇಕು.
- ಬಳಿಕ ಯುಐಡಿಎಐ ವೆಬ್ಸೈಟ್ಗೆ ಹೋಗಿ ಎಕ್ಸೆಪ್ಷನ್ ಪ್ರೋಸಸ್ಗೆ (exception process) ಮನವಿ ಸಲ್ಲಿಸಬೇಕು. ನಿಮ್ಮಲ್ಲಿರುವ ದಾಖಲೆಯನ್ನು ಯುಐಡಿಎಐಗೆ ಒದಗಿಸಬೇಕು. ಪ್ರಾಧಿಕಾರವು ಇದನ್ನು ಪರಿಶೀಲನೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ.
- ಒಂದು ವೇಳೆ ನೀವು ಜನ್ಮದಿನಾಂಕವನ್ನು ಮೊದಲ ಬಾರಿಗೆ ಅಪ್ಡೇಟ್ ಮಾಡುತ್ತಿದ್ದರೆ ಎಕ್ಸೆಪ್ಷನ್ ಪ್ರೋಸಸ್ ಅಗತ್ಯ ಇರುವುದಿಲ್ಲ. ನೇರವಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಿ ಸೂಕ್ತ ದಾಖಲೆ ನೀಡಿ ಅಪ್ಡೇಟ್ ಮಾಡಬಹುದು. ಹಾಗೊಂದು ವೇಳೆ ನಿಮ್ಮ ಮೊದಲ ಅಪ್ಡೇಟ್ ಮನವಿ ತಿರಸ್ಕೃತಗೊಂಡರೆ ನೀವು 1947 ನಂಬರ್ಗೆ ಕರೆ ಮಾಡಿ, ಕಾರಣ ತಿಳಿಯಬಹುದು. ತಪ್ಪಿದ್ದರೆ ಅದನ್ನು ಸರಿಪಡಿಸಿ ಮತ್ತೊಮ್ಮೆ ಪ್ರಯತ್ನಿಸಬಹುದು.