ಮಂಡ್ಯ:- ಜಾತಿ ಗಣತಿಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಜಾತಿ ಗಣತಿಯಿಂದ ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ರಾಜ್ಯದಲ್ಲಿ ಎಲ್ಲರಿಗೂ ನ್ಯಾಯಕೊಡಿಸುವ ಕೆಲಸ ಮಾಡುತ್ತಾರೆ ಎಂದರು. ನನಗೆ ಸಿದ್ದರಾಮಯ್ಯ ನವರ ಮೇಲೆ ನಂಬಿಕೆ ಇದೆ. ಸಿದ್ದರಾಮಯ್ಯ ನವರು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡಿ ಜಾತಿಗಣತಿ ಜಾರಿಗೊಳಿಸುತ್ತಾರೆ. ವರದಿ ಸ್ವೀಕಾರವು ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು ಎಂದರು.
ಮುಖ್ಯಮಂತ್ರಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ, ಎಲ್ಲ ಸಮಾಜದ ಅಹವಾಲು ಕೇಳಿದ್ದಾರೆ. ಯಾವ ಸಮಾಜದ ಆತಂಕ ಇದೆ ಅದನ್ನ ಮುಖ್ಯಮಂತ್ರಿ ಮುಂದೆ ಪ್ರಸ್ತಾಪ ಮಾಡಲಾಗಿದೆ. ಇದನ್ನು ಕ್ರೂಢೀಕರಿಸಿ ಸೂಕ್ತ ತೀರ್ಮಾನ ಮಾಡುತ್ತಾರೆ, ವರದಿ ಸಲ್ಲಿಕೆ ಆದ ಮೇಲೆ ಆತಂಕ ಪಡಬೇಕು. ಆತಂಕ ಪಟ್ಟಿರುವುದು ಸೂಕ್ತವಾಗಿದೀಯಾ ಆಮೇಲೆ ಅದನ್ನ ಸರಿ ಮಾಡಬೇಕು. ವರದಿ ಬಂದ ಮೇಲೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
NPCI guidelines: ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಡೀ ಆ್ಯಕ್ಟಿವೇಟ್: ಕಾರಣ!
ಕಾಂಗ್ರೆಸ್ ಪಕ್ಷದವರೇ ಜಾತಿ ಗಣತಿ ವರದಿ ಜಾರಿಗೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧ ಮಾಡಲು ಅವರು ಸ್ವತಂತ್ರ ಇದ್ದಾರೆ, ಅವರ ಅಭಿಪ್ರಾಯ ಹೇಳಿದ್ದಾರೆ, ಕ್ಯಾಬಿನೆಟ್ಗೆ ತಂದ ಮೇಲೆ ಸೂಕ್ತ ತೀರ್ಮಾನ ಮಾಡುತ್ತೇವೆ ಮಾಜಿ ಸಚಿವ ವಿ.ಸೋಮಣ್ಣ ವಿಚಾರವು ಅವರ ಪಕ್ಷದ ವಿಚಾರ ನಾನೇನು ಹೇಳಲು ಆಗುತ್ತೆ? ಅವರಿಗೆ ಬೇರೆ ಕ್ಷೇತ್ರದಲ್ಲಿ ನಿಲ್ಲಿಸಿ ಇರಿಸುಮುರಿಸು ಮಾಡಿರುವುದು ಸತ್ಯ ಅದನ್ನ ಹೇಳಿದ್ದಾರೆ ಅಷ್ಟೇ ಎಂದು ಹೇಳಿ ಹೊರಟು ಹೋದರು.