ಬಿಗ್ ಬಾಸ್ ಮನೆಗೆ (Bigg Boss Kannada 10) ಬಂದ ಮೇಲೆ ಮೈಕಲ್ ಕನ್ನಡ ಮತ್ತಷ್ಟು ಕಲಿತು ಮಾತನಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡ ಗೊತ್ತಿದ್ದೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವವರಿಗೆ ಸುದೀಪ್ ಹೇಳಿ, ಮೈಕಲ್ಗಿರುವ ಕನ್ನಡ ಭಾಷೆಯ ಮೇಲಿನ ಪ್ರೀತಿಗೆ ಚಪ್ಪಾಳೆ ನೀಡಿದ್ದಾರೆ. ಮೈಕಲ್ ಪ್ರಯತ್ನಕ್ಕೆ ಕಿಚ್ಚ (Sudeep) ಬೆನ್ನು ತಟ್ಟಿದ್ದಾರೆ.
ದೊಡ್ಮನೆಯಲ್ಲಿ ಕೋಪ ಬಂದಾಗ, ಅಪ್ಪಟ ಕನ್ನಡ ಮಾತಾನಾಡುವವರ ಬಾಯಲ್ಲೇ ಇಂಗ್ಲಿಷ್ ಬಂದುಬಿಡುತ್ತದೆ. ಆದರೆ ಮೊನ್ನೆ ಆದ ಗಲಾಟೆಯಯಲ್ಲಿ ನೀವು ಕೋಪದಲ್ಲಿದ್ರೂ ಕೂಡ ಹುಡುಕಿ ಕನ್ನಡ ಪದಗಳಲ್ಲೇ ಎದುರಾಳಿಗೆ ಉತ್ತರ ಕೊಡ್ತಾ ಇದ್ರಿ, ಅದಕ್ಕಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ. Opportunist ಅನ್ನೋ ಪದಕ್ಕೆ ಅರ್ಥ ಏನೆಂದು ತಿಳಿದುಕೊಂಡು ಕೊನೆಗೆ ಅವಕಾಶವಾದಿ ಅಂತ ಹೇಳಿದ್ದಕ್ಕೆ ಸುದೀಪ್ ಭೇಷ್ ಎಂದಿದ್ದಾರೆ.

ಕಳೆದ ವಾರ ಕಿಚ್ಚನ ಚಪ್ಪಾಳೆ ನಡೆದಿರಲಿಲ್ಲ. ಆದರೆ ಈ ವಾರ ನೀಡುತ್ತಿದ್ದೇನೆ. ಈ ವಾರ ಒಬ್ಬ ವ್ಯಕ್ತಿಗೆ ಆಟದ ಮೇಲೆ ಫೋಕಸ್ ಜಾಸ್ತಿ ಆಗುತ್ತದೆ, ಎಫರ್ಟ್ ಜಾಸ್ತಿ ಕಾಣಿಸುತ್ತದೆ. ತಂತ್ರಗಾರಿಕೆ ಚೆನ್ನಾಗಿತ್ತು. ಅದ್ಭುತವಾಗಿ ನನ್ನ ಕಣ್ಣಿಗೆ ಕಾಣಿಸಿದ್ದು ಮೈಕಲ್ ಅವರು. ಈ ವಾರ ಕಿಚ್ಚನ ಚಪ್ಪಾಳೆ ಮೈಕಲ್ಗೆ ಹೋಗುತ್ತಿದೆ. ನೀವು ಕನ್ನಡ ಮಾತನಾಡಲು ಹಾಕಿದ ಎಫರ್ಟ್ ಎದ್ದು ಕಾಣಿಸ್ತು. ಅದೇ ತುಂಬ ಪ್ಲಸ್ ಆಯ್ತು, ಮೈಕಲ್ ನಡೆಗೆ ಸುದೀಪ್ ಹಾಡಿ ಹೊಗಳಿದ್ದಾರೆ. ಒಟ್ನಲ್ಲಿ ಭಾಷೆ ಗೊತ್ತಿದ್ದರೂ ಮಾತನಾಡದವರ ಮುಂದೆ ಭಾಷೆ ಬರದ ಮೈಕಲ್ (Michael) ಕನ್ನಡ ಕಲಿತು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ.