ದೊಡ್ಮನೆಯಲ್ಲಿ ಆಟ (Bigg Boss Kannada 10) 8ನೇ ವಾರಕ್ಕೆ ಕಾಲಿಟ್ಟಿದೆ. 5 ಎಲಿಮಿನೇಟ್ ಆಗಿ 12 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಪ್ರತಿ ವಾರಾಂತ್ಯ ಬಂದು ಸುದೀಪ್, ಸ್ಪರ್ಧಿಗಳ ಕಿವಿ ಹಿಂಡುತ್ತಾರೆ. ಹೀಗಿರುವಾಗ, ಬಿಗ್ ಮನೆಗೆ ಕಾಲಿಟ್ಟ ದಿನದಿಂದ ಪ್ರತಾಪ್ ಕೆಲ ಸ್ಪರ್ಧಿಗಳಿಂದ ಹೆಜ್ಜೆ ಹೆಜ್ಜೆಗೂ ಟಾರ್ಗೆಟ್ ಆಗುತ್ತಲೇ ಬಂದಿದ್ದಾರೆ. ಇದೀಗ ಬಾತ್ರೂಮ್ ವಿಚಾರವಾಗಿ ಡ್ರೋನ್ ಪ್ರತಾಪ್ಗೆ (Drone Prathap) ಬೆದರಿಸಿದ್ದ ಸ್ನೇಹಿತ್ಗೆ ಸುದೀಪ್ (Kichcha Sudeep) ಸ್ಪೆಷಲ್ ಕ್ಲಾಸ್ ಮಾಡಿದ್ದಾರೆ.
ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ತಿರೋ ದೊಡ್ಮನೆ ಆಟ ಮತ್ತಷ್ಟು ಟಫ್ ಆಗ್ತಿದೆ. ಹೀಗಿರುವಾಗ ಸ್ನೇಹಿತ್ (Snehith Gowda) ಆಟ ಮತ್ತು ಸ್ಪರ್ಧಿಗಳ ಜೊತೆ ವರ್ತಿಸುವ ರೀತಿಯನ್ನ ಖಂಡಿಸಿದ ಸುದೀಪ್ ತಿದ್ದಿ ಬುದ್ಧಿ ಹೇಳಿದ್ದಾರೆ. ಬಾತ್ರೂಮ್ ಬಿಟ್ಟು ಕೊಡುವ ವಿಷ್ಯದಲ್ಲಿ ಸ್ನೇಹಿತ್ ನಡೆದುಕೊಂಡ ರೀತಿಗೆ ತರಾಟೆ ತೆಗೆದುಕೊಂಡಿದ್ದಾರೆ
ಶುಕ್ರವಾರದ ಎಪಿಸೋಡ್ನಲ್ಲಿ ಬಾತ್ರೂಂಗೆ ಹೋಗಲು ಬಂದ ಡ್ರೋನ್ ಪ್ರತಾಪ್ ಅನ್ನು ಅಲ್ಲೇ ಇದ್ದ ಸ್ನೇಹಿತ್ ಉದ್ದೇಶಪೂರ್ವಕವಾಗಿ ತಡೆದಿದ್ದರು. ಆಗಿದ್ದಿಷ್ಟು ವಿನಯ್ ಸ್ನಾನಕ್ಕೆ ಹೋಗಲು ಕಾಯುತ್ತಿದ್ದರು, ಡ್ರೋನ್ ಪ್ರತಾಪ್ ಸಹ ಅಲ್ಲಿಯೇ ಇದ್ದರು. ಅಸಲಿಗೆ ಆಗ ಡ್ರೋನ್ ಪ್ರತಾಪ್ ಆಗ ಬಾತ್ರೂಂ ಬಳಸಬೇಕಿತ್ತು. ಆದರೆ ವಿನಯ್, ಟವೆಲ್ ತರಲು ಹೋಗುತ್ತಿರುವುದಾಗಿ ಹೇಳಿ ಹೋದರು, ಆಗ ಡ್ರೋನ್ ಪ್ರತಾಪ್ ಬಾತ್ರೂಂ ಒಳಗೆ ಹೋಗಿಬಿಡುತ್ತಾರೆ ಎಂದು, ಸ್ನೇಹಿತ್ ಕೂಡಲೇ ಬಾತ್ರೂಂಗೆ ನುಗ್ಗಿದರು.
ಸ್ನೇಹಿತ್ಗೆ ಬಾತ್ರೂಂನಲ್ಲಿ ಏನೂ ಕೆಲಸವಿರಲಿಲ್ಲ ಆದರೆ ಪ್ರತಾಪ್ ಬಾತ್ರೂಂ ಬಳಸದಂತೆ ತಡೆಯಲು ಹಾಗೆ ಮಾಡಿದರು. ಹೊರಗಿನಿಂದ ಪ್ರತಾಪ್ ಕರೆದರೂ, ಕೇಳಿ ಕೊಂಡರು ಹೊರಗೆ ಬರಲಿಲ್ಲ, ಬಳಿಕ ವಿನಯ್ ಬಂದಮೇಲೆ ಸ್ನೇಹಿತ್ ಹೊರಗೆ ಬಂದು, ವಿನಯ್ಗೆ ಬಾತ್ರೂಂ ಬಿಟ್ಟುಕೊಟ್ಟರು. ಇದನ್ನು ಪ್ರಶ್ನೆ ಮಾಡಿದ ಪ್ರತಾಪ್ ಅನ್ನು ಏನು ಮಾಡ್ಕೋತೀಯಾ ಎಂದು ಬೆದರಿಕೆ ಹಾಕುವ ರೀತಿಯಲ್ಲಿ ಸ್ನೇಹಿತ್ ಪ್ರತಾಪ್ ಮೇಲೆ ಗರಂ ಆಗಿದ್ದರು.