ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕ್ಯಾಬಿನೆಟ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕೇಸ್ ವಿಥ್ಡ್ರಾ ಮಾಡಿದ್ದನ್ನು ನೋಡಿದರೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ ಸರ್ಕಾರ ನಡೆಸುತ್ತಿರೋರು ಸಿದ್ದರಾಮಯ್ಯ ಅಲ್ಲ ಡಿಕೆ ಶಿವಕುಮಾರ್ ಅಂತ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಹೇಳಿಕೆ ನೀಡಿದ್ದಾರೆ.
ಡಿಸಿಎಂ ಡಿಕೆಶಿ ಮೇಲೆ ಸಿಬಿಐ ಕೇಸ್ (CBI Case) ಪ್ರಸ್ತಾವನೆ ವಾಪಸ್ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ನಿರಾಣಿ, ಡಿಕೆ ಶಿವಕುಮಾರ್ ಅವರು ರಾಜಕೀಯವಾಗಿ ಹಿರಿಯರು. ಸಾಕಷ್ಟು ಏಳು ಬೀಳು ನೋಡಿದಂತವರು. ಈಗಾಗಲೇ ಈ ಕೇಸ್ ಕೋರ್ಟ್ನಲ್ಲಿ ತನಿಖೆ ಹಂತದಲ್ಲಿರುವಾಗ ಅದನ್ನು ಏಕಾಏಕಿಯಾಗಿ ಹೆದರಿಕೆಯಿಂದ ಸೋಲಾಗುತ್ತದೆ ಎಂಬ ಭಾವನೆಯಿಂದ ಕ್ಯಾಬಿನೆಟ್ನಲ್ಲಿ ವಿಥ್ ಡ್ರಾ ಮಾಡಿದ್ದಾರೆ. ಇದು ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
NPCI guidelines: ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಡೀ ಆ್ಯಕ್ಟಿವೇಟ್: ಕಾರಣ!
ಸಿದ್ದರಾಮಯ್ಯ ಅವರ ಬಗ್ಗೆ ಕರ್ನಾಟಕದಲ್ಲಿ ಅವರದ್ದೇ ಆದ ಘನತೆ ಗೌರವವಿತ್ತು. ಅವರು ಕಾನೂನಿಗೆ ತಲೆ ಬಾಗುತ್ತಾರೆ. ಕಾನೂನಿಗೆ ಹೆಚ್ಚು ಗೌರವ ಕೊಡುತ್ತಾರೆ ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ನಲ್ಲಿ ಡಿಕೆ ಶಿವಕುಮಾರ್ ಕೇಸ್ ವಿಥ್ಡ್ರಾ ಮಾಡಿದ್ದನ್ನು ನೋಡಿದರೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ ಸರ್ಕಾರ ನಡೆಸುತ್ತಿರೋರು ಸಿದ್ದರಾಮಯ್ಯ ಅಲ್ಲ ಡಿಕೆಶಿ ಎಂದು ಆರೋಪಿಸಿದರು.