ದೊಡ್ಡಬಳ್ಳಾಪುರ : ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿಯನ್ನ ಬಾರ್ ನಲ್ಲಿ ನೋಡುತ್ತಿದ್ದ ವೇಳೆ, ಯುವಕನ ನಡುವೆ ಜಗಳವಾಗಿದೆ, ಯುವಕರ ನಡುವಿನ ಜಗಳವನ್ನ ಸ್ನೇಹಿತನೊಬ್ಬ ಸುಮ್ಮನಾಗಿಸಿದ್ದ, ಅದೇ ವ್ಯಕ್ತಿಯನ್ನ ರಾಜಿ ಸಂಧಾನಕ್ಕೆ ಕರೆದಿದ್ದಾಗ, ಆತ ಬರದೆ ಇದ್ದಾಗ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡಿಸಿ ಪರಾರಿಯಾಗಿದ್ದರು, ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನ ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಯಲ್ಲಿ ಅರೆಗುಡ್ಡದಹಳ್ಳಿ ಗ್ರಾಮದ 26 ವರ್ಷದ ಯುವಕ ಪೃಥ್ವಿರಾಜ್ ಹಲ್ಲೆಗೆ ತುತ್ತಾಗಿದ್ದ, ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದಿದ್ದ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಚಿಕಿತ್ಸೆಯ ನಂತರ ಚೇತರಸಿಕೊಂಡಿದ್ದಾನೆ, ಹಲ್ಲೆ ನಡೆಸಿದ ಉಲ್ಲಾಸ್, ಮಧು ಸೇರಿದಂತೆ ಆತನ ಸ್ನೇಹಿತರು ಪರಾರಿಯಾಗಿದ್ದರು, ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸರು ಆರೋಪಿಗಳನ್ನ ಬೆನ್ನತ್ತಿದ್ದರು, ಉಲ್ಲಾಸ್ ಮತ್ತು ಮಧುನನ್ನ ಪೊಲೀಸರು ಬಂಧಿಸಿದ್ದು ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ.
NPCI guidelines: ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಡೀ ಆ್ಯಕ್ಟಿವೇಟ್: ಕಾರಣ!
ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ನಡೆದ ಜಗಳವನ್ನ ಬಿಡಿಸಿ ಬಂದಿದ್ದ ಪೃಥ್ವಿರಾಜ್ ತನ್ನ ಪಾಡಿಗೆ ಸುಮ್ಮನಿದ್ದ, ನವೆಂಬರ್ 22ರ ಸಂಜೆ ರೈಲ್ವೆ ಸ್ಟೇಷನ್ ಬಳಿಯ ಟೀ ಅಂಗಡಿಯಲ್ಲಿ ಪೃಥಿರಾಜ್ ಸ್ನೇಹಿತರ ಜೊತೆ ಇದ್ದಾಗ, ಅಲ್ಲಿಗೆ ಬಂದ ಉಲ್ಲಾಸ್ ಮತ್ತು ಆತನ ಸ್ನೇಹಿತರು ರಾಜಿ ಸಂಧಾನದ ಮಾತುಕತೆಗೆ ಬರುವಂತೆ ಪೃಥ್ವಿರಾಜ್ ಹೇಳಿದ್ದಾರೆ, ನಾನ್ಯಾಕೆ ಬರ್ಬೇಕೆಂದು ಸುಮ್ಮನಾಗಿದ್ದಾನೆ, ಇದರಿಂದ ಕೆರಳಿದ ಉಲ್ಲಾಸ್ ಮತ್ತು ಆತನ ಸ್ನೇಹಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.